Header Ads
Header Ads
Breaking News

ವಿಟ್ಲ ಸಮೀಪದ ನೂತನ ಅಜ್ಜಿನಡ್ಕ ಆನ್‌ಲೈನ್ ಸೇವಾ ಕೇಂದ್ರ, ಕೆಸಿಸಿ ಆರೋಗ್ಯ ಕಾರ್ಡ್ ವಿತರಣೆ

ವಿಟ್ಲ ಸಮೀಪದ ಪುಣಚ ಗ್ರಾಮದ ಅಜ್ಜಿನಡ್ಕದಲ್ಲಿ ನೂತನ ಅಜ್ಜಿನಡ್ಕ ಆನ್‌ಲೈನ್ ಸೇವಾ ಕೇಂದ್ರ ಹಾಗೂ ಕೆಸಿಸಿ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭವನ್ನು ಜಿ.ಪಂ.ಸದಸ್ಯ ಎಂ.ಎಸ್ ಮುಹಮ್ಮದ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು.
ಬಳಿಕ ಮಾತನಾಡಿದ ಅವರು ವ್ಯವಹಾರ ಕ್ಷೇತ್ರದಲ್ಲಿ ಗ್ರಾಹಕರ ಪ್ರೀತಿ ವಿಶ್ವಾಸದ ಮೂಲಕ ವ್ಯವಹಾರ ಕ್ಷೇತ್ರ ಪ್ರಗತಿಯನ್ನು ಕಾಣಲು ಸಾಧ್ಯವಿದೆ ಹಾಗೂ ಕೆಸಿಸಿ ಕಾರ್ಡ್ ಉಪಯೋಗವನ್ನು ಬಡವರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುಣಚ ಗ್ರಾ.ಪಂ.ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿ ವಹಿಸಿ ಮಾತನಾಡಿ, ಸಮಾಜದಲ್ಲಿ ಜನಸಾಮಾನ್ಯರ ಕಷ್ಟ ಸುಖಗಳಿಗೆ ಆನ್ ಲೈನ್ ಸೇವಾ ಕೇಂದ್ರ ಸಹಕಾರಿಯಾಗಲಿದೆ ಮತ್ತು ಆರೋಗ್ಯದ ವಿಚಾರದಲ್ಲಿ ಕೆಸಿಸಿ ಸಂಸ್ಥೆಯ ಸೇವೆ ಪ್ರಶಂಸನೀಯ ಎಂದರು . ಕಾರ್ಯಕ್ರಮದಲ್ಲಿ ಪುಣಚ ಗ್ರಾ.ಪಂ.ಸದಸ್ಯರಾದ ಲಲಿತ, ಜಲಾಲಿಯಾ ಯಂಗ್ ಮೆನ್ಸ್ ಗೌರವಧ್ಯಕ್ಷರಾದ ಪಕ್ರುದ್ದೀನ್ ಹಾಜಿ ಪಟಿಕಲ್ಲು, ಹಿರಿಯರಾದ ಚೆನ್ನಪ್ಪ ಪೂಜಾರಿ, ಪುಣಚ ಗ್ರಾ.ಪಂ.ಸದಸ್ಯ ಉದಯಕುಮಾರ್ ದಂಬೆ, ನಾರಾಯಣ ನಾಯ್ಕ ಪಟಿಕಲ್ಲು, ಕಟ್ಟಡ ಮಾಲಕ ನಾರಾಯಣ ಭಂಢಾರಿ, ಯು.ಟಿ ಅಬ್ದುಲ್ ರಹಿಮಾನ್ , ಹೊನೆಸ್ಟ್ ಸಿರಾಜ್ ಮಣಿ , ದಿನೇಶ್, ಜಯಲಕ್ಷ್ಮಿ ಪಟ್ಟುಮೂಲೆ, ಮಹಾಬಲ ಎನ್, ಅಬ್ಬಾಸ್ ಸಿಲ್ ಸಿಲಾ, ಸುಲೈಮಾನ್ ಅಜ್ಜಿನಡ್ಕ, ಇಸ್ಮಾಯಿಲ್ ಅಜ್ಜಿನಡ್ಕ, ರವಿನಾಯ್ಕ ಅಜ್ಜಿನಡ್ಕ, ಆನ್ ಲೈನ್ ಸೇವಾ ಕೇಂದ್ರದ ಮಾಲಕ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ, ಹಾಗೂ ಕೆಸಿಸಿ ಸಿಬ್ಬಂದಿ ನಿಸಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *