Header Ads
Header Ads
Header Ads
Header Ads
Header Ads
Header Ads
Breaking News

ವಿಟ್ಲ ಸರ್ಕಾರಿ ಶಾಲೆಯ ಶೌಚಾಲಯ ಕೊಠಡಿ ಉದ್ಘಾಟನೆ

ವಿಟ್ಲ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವ ಸುರೇಶ್ ಕುಮಾರ್ ಅವರು ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯ ಶೌಚಾಲಯ ಕೊಠಡಿ ಉದ್ಘಾಟಿಸಿ, ಸರ್ಕಾರದ ಉಚಿತ ಸೈಕಲ್‍ಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. 140 ವರ್ಷಗಳ ಇತಿಹಾಸವಿರುವ ವಿಟ್ಲ ಸರಕಾರಿ ಮಾದರಿ ಶಾಲೆ ಹೆಸರಿಗೆ ತಕ್ಕಂತೆ ಆಧುನಿಕ ವ್ಯವಸ್ಥೆಯೊಂದಿಗೆ, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿಗೆ ಆಂಗ್ಲ ಮಾಧ್ಯಮದ 9 ಮತ್ತು 10ನೇ ತರಗತಿಗೆ ಅತೀ ಶೀಘ್ರವಾಗಿ ಮಂಜೂರಾತಿ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *