Header Ads
Breaking News

ವಿಠಲ ಜಿ.ಎಸ್.ಬಿ.ಸೌಹಾರ್ದ ಸಹಕಾರಿ ನಿಯಮಿತದ ಉದ್ಘಾಟನೆ : ಜನವರಿ 26ರಂದು ನಡೆಯಲಿರುವ ಕಾರ್ಯಕ್ರಮ

ವಿಟ್ಲ: ವಿಠಲ ಜಿ.ಎಸ್.ಬಿ.ಸೌಹಾರ್ದ ಸಹಕಾರಿ ನಿಯಮಿತ ವಿಟ್ಲ ಇದರ ಶುಭಾರಂಭವು ಅರಮನೆ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್‍ನ ಎರಡನೇ ಮಹಡಿಯಲ್ಲಿ ಜ.26ರಂದು ಬೆಳಗ್ಗೆ ಗಂಟೆ 9.30ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ ಪಿ.ರಾಧಾಕೃಷ್ಣ ಪೈ ತಿಳಿಸಿದರು.

ಅವರು ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹಕಾರಿ ಸಂಸ್ಥೆಯನ್ನು ಆರಂಭಿಸಬೇಕೆನ್ನುವ ಜಿಎಸ್‍ಬಿ ಸಮಾಜದ ಹಿರಿಯರ ಯೋಜನೆ ಮತ್ತು ಯೋಚನೆ ಇದೀಗ ಕಾರ್ಯರೂಪಕ್ಕೆ ಬಂದಿದೆ. ಜಿಎಸ್‍ಬಿ ಸಮಾಜವು ವಿಟ್ಲದಲ್ಲಿ ಮುಂಚೂಣಿಯಲ್ಲಿದ್ದು ಒಟ್ಟಾಗಿ ವ್ಯಾಪಾರೀ ಕುಟುಂಬವೆಂದರೆ ತಪ್ಪಾಗಲಾರದು. ವಿಟ್ಲದಲ್ಲಿ ಸೀಮಿತವಾಗಿರುವ ಜಿಎಸ್‍ಬಿ ಸಮಾಜವು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಹಕಾರ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದೆ. ಈ ಸಂಸ್ಥೆಯು ಕೂಡಾ ಸಮಾಜದ ವ್ಯವಹಾರಕ್ಕೆ ಸಿಗಲಿದೆ. ಪ್ರಥಮ ವರ್ಷದಲ್ಲೇ 5 ಕೋಟಿಗೂ ಅಧಿಕ ವ್ಯವಹಾರ ನಡೆಸುವ ಗುರಿಯನ್ನು ಹೊಂದಿದೆ. ದ.ಕ.ಜಿಲ್ಲೆಯಾದ್ಯಂತ ಶಾಖೆಗಳನ್ನು ತೆರೆಯುವ ಉದ್ದೇಶವಿರಿಸಲಾಗಿದೆ ಎಂದು ಅವರು ಹೇಳಿದರು.

ಉಪಾಧ್ಯಕ್ಷರಾಗಿ ಸುಭಾಶ್ಚಂದ್ರ ನಾಯಕ್, ನಿರ್ದೇಶಕರಾಗಿ ಪಿ.ಸುಬ್ರಾಯ ಪೈ, ಎನ್.ನವನೀತ ಭಟ್, ಶ್ರೀಧರ ಪೈ, ಕೆ.ಕೃಷ್ಣಪ್ರಸಾದ, ಎಂ.ರಾಧಾಕೃಷ್ಣ ನಾಯಕ್, ವಿ.ರಾಮದಾಸ ಶೆಣೈ, ಕೆ.ಮುರಳೀಧರ ಭಟ್, ಎಂ.ನಿತ್ಯಾನಂದ ನಾಯಕ್, ಎಂ.ಹರೀಶ್ ನಾಯಕ್, ಕೆ.ಪ್ರೀತಾ ಭಟ್, ವೀಣಾ ವಿ.ಪೈ ಅವರು ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ನಾಮಫಲಕವನ್ನು ಅನಾವರಣಗೊಳಿಸಲಿದ್ದಾರೆ. ಮಂಗಳೂರು ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್ ತಂತ್ರಾಂಶ ಅನಾವರಣಗೊಳಿಸಲಿದ್ದಾರೆ. ನಿವೇದಿತಾ ಗೋಕುಲನಾಥ್ ಪ್ರಭು ಮಂಗಳೂರು ಅವರು ಠೇವಣಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಕಾರಿ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ಮತ್ತು ಸೌಹಾರ್ದ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಬಂಗೇರ ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸುಭಾಶ್ಚಂದ್ರ ನಾಯಕ್, ಎಂ.ರಾಧಾಕೃಷ್ಣ ನಾಯಕ್, ಕೆ.ಕೃಷ್ಣಪ್ರಸಾದ, ಎಂ.ರಾಧಾಕೃಷ್ಣ ನಾಯಕ್, ಎಂ.ನಿತ್ಯಾನಂದ ನಾಯಕ್, ಕೆ.ಪ್ರೀತಾ ಭಟ್ ಮತ್ತು ಸಿಇಒ ಗಜಾನನ ಬಾಳಿಗಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *