Header Ads
Header Ads
Breaking News

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು. ಎಚ್.ಟಿ. ಲೈನ್ ಎಳೆಯುವ ಸಂದರ್ಭದಲ್ಲಿ ಘಟನೆ. ಸುಳ್ಯ ಸಮೀಪದ ಬೊಳಿಯ ಮಜಲಿನಲ್ಲಿ ದುರ್ಘಟನೆ.

ವಿದ್ಯುತ್ ಕಂಬ ದುರಸ್ಥಿ ವೇಳೆ ಲೈನ್‌ಮೆನ್ ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪದ ಬೊಳಿಯ ಮಜಲಿನಲ್ಲಿ ನಡೆದಿದೆ.ಆಲೆಟ್ಟಿ ಗ್ರಾಮದ ಜನಾರ್ದನ ನಾಯ್ಕ ಎಂಬವರು ಸಾವನ್ನಪ್ಪಿದ ದುರ್ದೈವಿ. ಸುಳ್ಯ ಮೆಸ್ಕಾಂನ ಹೊರಗುತ್ತಿಗೆ ಆಧಾರದಲ್ಲಿ ಕಳೆದ 20ವರ್ಷಗಳಿಂದ ಲೈನ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಬುಧವಾರ ಸಂಜೆ ವೇಳೆ ಜಟ್ಟಿಪಳ್ಳ ಸಮೀಪದ ಬೊಳಿಯ ಮಜಲಿನಲ್ಲಿ ಜನಾರ್ಧನ ನಾಯ್ಕ ಮತ್ತು ಅವರ ಸಹೋದರ ಹರೀಶ್ ನಾಯ್ಕ ಅವರು ಇಬ್ಬರೂ ಜತೆಯಲ್ಲಿ ಹೆಚ್‌ಟಿ ಲೈನ್‌ನಲ್ಲಿ ಬೆಳಿಗ್ಗಿನಿಂದಲೇ ಕೆಲಸ ಮಾಡುತ್ತಿದ್ದರು. ಅವಘಡ ಸಂಭವಿಸಿದ್ದ ಸಂದರ್ಭ ಸಹೋದರರಿಬ್ಬರೂ ಒಂದೇ ವಿದ್ಯುತ್ ಕಂಬದಲ್ಲಿ ಕೆಲಸಮಾಡುತ್ತಿದ್ದರು. ಹರೀಶ್ ನಾಯ್ಕ ಕಂಬದ ಮಧ್ಯಭಾಗದಲ್ಲಿದ್ದು, ಜನಾರ್ಧನ ನಾಯ್ಕ ಅವರು ಕಂಬದ ತಂತಿಯಲ್ಲಿ ದುರಸ್ಥಿ ಮಾಡುತ್ತಿದ್ದರು. ಇದೇ ವೇಳೆ ಮೆಸ್ಕಾಂ ಖಾಯಂ ಲೈನ್‌ಮೆನ್ ಏಕಾಏಕಿ ಚಾರ್ಜ್ ಮಾಡಿದಾಗ ಜನಾರ್ಧನ ನಾಯ್ಕ ವಿದ್ಯುತ್ ಸ್ಪರ್ಶದಿಂದ ಶರೀರ ಸಂಪೂರ್ಣ ಸುಟ್ಟುಹೋಗಿ ವಿದ್ಯುತ್ ಕಂಬದಲ್ಲೇ ಸಾವನ್ನಪ್ಪಿದರು.ಈ ವಿಷಯ ತಿಳಿದ ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ ಮತ್ತು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಶವವನ್ನು ಇಳಿಸಿ, ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಶವಪರೀಕ್ಷೆ ಮಾಡಲಾಯಿತು. ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply