
ಕಾಂಗ್ರೆಸ್ ಗೂಂಡಾಗಿರಿಯ ರಾಜಕಾರಣವನ್ನು ಮಾಡಿ ರಾಜ್ಯದ ಜನತೆಗೆ ಅವಮಾನವನ್ನು ಮಾಡಿದೆ. ರಾಜ್ಯದಲ್ಲಿ ಇತಿಹಾಸ ಇರುವಂತಹ ವಿಧಾನಪರಿಷತ್ ಹಿರಿಯ ಮಾರ್ಗದರ್ಶನದಲ್ಲಿ ವಿಧಾನ ಪರಿಷತ್ ನಡೆಯುತ್ತದೆ. ಪೀಠದಲ್ಲಿದ್ದ ಉಪಸಭಾಪತಿಗಳನ್ನು ಎಳೆದು ಹೊರ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಇದು ಗೂಂಡಾಗಿರಿಯ ರಾಜಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಇಂದು ವಿಧಾನ ಪರಿಷತ್ನ ಕಲಾಪದ ಅವಧಿಯಲ್ಲಿ ನಡೆದ ಕೋಲಾಹಲದ ಬಗ್ಗೆ ಪ್ರತಿಕ್ರಿಯೆ ನೀಡಿದರು. ವಿಧಾನ ಪರಿಷತ್ನ ಸಭಾಪತಿಗಳ ಬಗ್ಗೆ ಆವಿಶ್ವಾಸ ನಿರ್ಣಯ ಆಗಿದೆ. ಹಾಗಾಗಿ ಬಿಲ್ಗಳ ಬಗ್ಗೆ ಚರ್ಚೆ ಮಾಡಬೇಕಾದದ್ದು ಉಪಸಭಾಪತಿಗಳ ಕರ್ತವ್ಯ. ಆ ಪ್ರಕ್ರಿಯೆ ಆಧಾರದಲ್ಲಿ ಉಪಸಭಾಪತಿಗಳು ಪೀಠದಲ್ಲಿ ಕುಳಿತ್ತಿದ್ದರು. ಅವರ ಮೇಲೆ ದಾಂಧಲೆ ಮಾಡುವಂತಹ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಕಾಂಗ್ರೆಸ್ ರಾಜ್ಯದ ಜನತೆಯ ಮುಂದೆ ಕ್ಷಮೆಯಾಚಿಸಬೇಕು.ಈ ರೀತಿಯ ಕಗ್ಗೊಲೆಗಳು ಇನ್ಮುಂದಕ್ಕೆ ಆಗಬಾರದು ಎಂದು ಹೇಳಿದರು.