Header Ads
Header Ads
Breaking News

ವಿನೂತನ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ. ಉಪ್ಪಳ ಮಣಿಮುಂಡ ಶಾಲೆಯಲ್ಲಿ ಕಾರ್ಯಕ್ರಮ. ರಾಷ್ಟ್ರಧ್ವಜದ ಚಿತ್ರ ರಚಿಸಿ ಆಚರಣೆ.

ಮಂಜೇಶ್ವರ: ಎಲ್ಲರೂ ಸಂಭ್ರಮ ಹಾಗೂ ಸಡಗರದಿಂದ ಸ್ವಾತಂತ್ರ್ಯೋತ್ಸವನ್ನು ಆಚರಿಸುತ್ತಿರುವ ಮಧ್ಯೆ ಉಪ್ಪಳದ ಮಣಿ ಮುಂಡ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರ ಧ್ವಜವನ್ನು ಚಿತ್ರಿಸಿ ವಿನೂತನ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.ಉಪ್ಪಳ ಮಣಿ ಮುಂಡ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಚಿತ್ರಕಾರ ಸಾಹಿತಿ ಹಾಗೂ ಹಲವಾರು ಪ್ರಶಶ್ತಿಗಳನ್ನು ಪಡಕೊಂಡ ಶ್ರೀ ಪಿ ಎಸ್ ಪುಂಣಿಚಿತ್ತಾಯರವರು ಶಾಲಾ ಸಭಾಂಗಣದೊಳಗೆ ತಮ್ಮ ಹಸ್ತದಿಂದ ಫಲಕದಲ್ಲಿ ರಾಷ್ಟ್ರ ಧ್ವಜವನ್ನು ಬಿಡಿಸುವ ಮೂಲಕ ಸ್ವಾತಂತ್ರೋತ್ಸವದ ದಿನಾಚರಣೆಗೆ ವಿಶೇಷ ಮೆರುಗನ್ನು ನೀಡಿದ್ದಾರೆ.ಬಳಿಕ ಮಾತನಾಡಿದ ಅವರು ಪ್ರತೀ ವರ್ಷವೂ ಸ್ವಾಂತತ್ರ್ಯ ದಿನಾಚರಣೆಯಲ್ಲಿ ವಿಶೇಷವಾದ ಒಂದು ಮೆರುಗನ್ನು ನೀಡಬೇಕಾಗಿದೆ.ಅಂತಹ ಉದ್ದೇಶದಲ್ಲಿ ನಾನು ಇವತ್ತು ರಾಷ್ಟ್ರ ಧ್ವಜ ಹಾರಾಡುತ್ತಿರುವ ರೀತಿಯ ಒಂದು ಚಿತ್ರವನ್ನು ಮಕ್ಕಳೆದುರಲ್ಲಿ ಅನಾವರಣಗೊಳಿಸಿದ್ದೇನೆ. ನಮ್ಮ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಬಳಿಕ ಅವರು ಶಾಲೆಗೆ ಬರುತ್ತಾರೆ. ಆದರೆ ಪೋಷಕರು ಮೊದಲು ಮನೆಯಲ್ಲೇ ರಕ್ಷಕರ ಜೊತೆಯಾಗಿ ಶಿಕ್ಷಕರಾಗಬೇಕಾಗಿದೆ. ಹಾಗಿದ್ದರೆ ಮಾತ್ರ ನಮ್ಮ ಮಕ್ಕಳು ಮುಂದಿನ ಜನಾಂಗದ ಒಂದು ಒಳ್ಳೆಯ ಪೀಳಿಗೆಯಾಗಬಹುದು ಎಂಬುದಾಗಿ ಹೇಳಿ ಶುಭ ಹಾರೈಸಿದರು.ಇದಕ್ಕೂ ಮೊದಲು ನಡೆದ ಧ್ವಜಾರೋಹಣ ಕಾರ್ಯವನ್ನು ಶಾಲಾ ಸಮಿತಿಯ ಅಧ್ಯಕ್ಷರಾದ ಮೂಸಾ ಆಲುವಾಯಿಯವರು ನಿರ್ವಹಿಸಿದ್ದಾರೆ. ಕನ್ನಡ, ಇಂಗ್ಲೀಷ್ ಮಲಯಾಳಂ, ಹಿಂದಿ ಉರ್ದು ಹಾಗೂ ಅರಬಿ ಬಾಷೆಗಳಲ್ಲಿ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.ಬಳಿಕ ಶಾಲೆಯ ಮುಖ್ಯ ನಿರ್ವಾಹಕ ಅಝೀಂ ಮಣಿಮುಂಡ ಮಾತನಾಡಿಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರನ್ನು ನೆನಪಿಸಿಕೊಂಡು ನಾವು ಇಂದು ಸ್ವಾತಂತ್ರ್ಯಾ ದಿನಾಚರಣೆಯನ್ನು ಆಚರಿಸುತಿದ್ದೇವೆ. ಇದರ ಜೊತೆಯಾಗಿ ಭಾರತದ ಗಡಿ ಪ್ರದೆಶದಲ್ಲಿ ಕಾವಲು ಪಡೆಯಾಗಿರುವ ಸೈನಿಕರಿಗೆ ಕೂಡಾ ನಾವು ಅದೆಷ್ಟೋ ಅಭಿನಂದನೆಯನ್ನು ಹೇಳಿದರೆ ಸಾಲದು. ಇವತ್ತು ನಮ್ಮ ಶಾಲೆಗೆಅಂತಾರಾಷ್ಟ್ರೀಯ ಚಿತ್ರ ರಚನೆಗಾರ ಪಿ ಎಸ್ ಪುಂಣಿಚಿತ್ತಾಯರವರು ಆಗಮಿಸಿದ್ದಾರೆ. ಅವರ ದಿವ್ಯ ಹಸ್ತದಿಂದ ರಾಷ್ಟ್ರ ಧ್ವಜದ ಚಿತ್ರ ಬಿಡಿಸುವುದನ್ನು ನೇರವಾಗಿ ವೀಕ್ಷಿಸುವ ಅವಕಾಶ ನಮಗೆಲ್ಲರಿಗೂ ಲಭಿಸಿದ್ದು ಸಂತೋಷದ ವಿಷಯ ಎಂದು ಅವರು ಹೇಳಿದರುಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ರವಿ ನಾಯ್ಕಾಪ್ ಉಪಸ್ಥರಿದ್ದರು. ವೇದಿಕೆಯಲ್ಲಿ ಹಸನ್ ಕಮಾಲ್, ಮೊಹಮ್ಮದ್ ಶಬೀಲ್, ಶಬೀರ್ ಆಲುವಾಯಿ, ಝಫರುಲ್ಲ, ಮುಖ್ಯೋಪಾಧ್ಯಾಯಿನಿ ಶಮೀನಾ ಇಕ್ಬಾಲ್, ಮೊಹಮ್ಮದ್ ಮೆಹಫೂಝ್ ಹಾಗೂ ಹಫೀಫ ಬಾನು ಶಾಲೆಯ ಮುಖ್ಯ ನಿರ್ವಾಹಕ ಅಝೀಂ ಮಣಿಮುಂಡ, ಮೊಹಮ್ಮದ್ ಸೈಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

Leave a Reply