Header Ads
Breaking News

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜ.27ರಂದು ಸುಳ್ಯದಲ್ಲಿ ಪ್ರತಿಭಟನೆ; ಬಿ.ಕೆ.ಸೇಸಪ್ಪ ಬೆದ್ರಕಾಡು

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು, ಡಿ.ಸಿ.ಮನ್ನಾ ಜಮೀನನ್ನು ಪ.ಜಾತಿ ಮತ್ತು ಪಂಗಡದ ಭೂ ವಂಚಿತರಿಗೆ ಹಸ್ತಾಂತರ ಮತ್ತು ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಹೀಗೆ ಹಲವು ಬೇಡಿಕೆಗಳನ್ನು ಮುಂದಿರಿಸಿಕೊಂಡು ಜ. 27 ರಂದು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಹೇಳಿದರು.

ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಬೇಡಿಕೆಗಳನ್ನು ಮುಂದಿರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಭಟನಾ ಸ್ಥಳಕ್ಕೆ ಆ ಕ್ಷೇತ್ರದ ಶಾಸಕರೇ ಬಂದು ಮನವಿ ಸ್ವೀಕರಿಸಿ, ಬೇಡಿಕೆಯ ಕುರಿತು ಸಮರ್ಪಕ ಉತ್ತರ ನೀಡುವ ವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದ ಅವರು ಸುಳ್ಯದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕೆಲಸ ಪೂರ್ಣಗೊಳಿಸಬೇಕು. ತಾಲೂಕು ಕಚೇರಿಯ ಎದುರು ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕು. ತಾಲೂಕಿನಲ್ಲಿರುವ ಡಿ.ಸಿ.ಮನ್ನಾ ಭೂಮಿಯನ್ನು ಸರ್ವೇ ನಡೆಸಿ, ಅದನ್ನು ಭೂಮಿಯಿಲ್ಲದ ದಲಿತರಿಗೆ ಹಂಚಿಕೆ ಮಾಡಬೇಕು ಎಂದು ಹೇಳಿದರು.

ಸುದ್ದಿ ಗೋಷ್ಟಿಯಲ್ಲಿ ಸುಳ್ಯ ತಾಲೂಕು ಅಧ್ಯಕ್ಷ ವಸಂತ ಕುದ್ಪಾಜೆ, ದಲಿತ ಮುಖಂಡರಾದ ಕೇಶವ ಕುಪ್ಲಾಜೆ, ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ನಾರಾಯಣ ತೊಡಿಕಾನ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *