Header Ads
Header Ads
Breaking News

ವಿವಿಧ ಬೇಡಿಕೆ ಈಡೇರಿಕೆಗಾಗಿ ಯುಪಿಸಿಎಲ್ ಕಂಪೆನಿ ಕಾರ್ಮಿಕರಿಂದ ಪ್ರತಿಭಟನೆ

ಯುಪಿಸಿಎಲ್ ನಮಗೆ ಅನ್ನ ನೀಡಿದ ಸಂಸ್ಥೆ, ಅದರ ವಿರುದ್ಧ ನಾವು ಪ್ರತಿಭಟಿಸಬಾರದಿತ್ತು, ಆದರೆ ಆ ಸನ್ನಿವೇಶವನ್ನು ಕಂಪನಿಯ ಅಧಿಕಾರಿಗಳು ಸೃಷ್ಠಿಸಿದ್ದಾರೆ, ಊರಿನವರ ವಿರೋಧ ಕಟ್ಟಿಕೊಂಡು ಅವರಿಂದ ಪೆಟ್ಟು ತಿಂದು ಕಂಪನಿ ನಿರ್ಮಾಣಕ್ಕಾಗಿ ಹೋರಾಡಿದವರು ನಾವು, ಆದರೆ ಇದೀಗ ಬದುಕು ಕಟ್ಟ ಬೇಕಾದ ನಾವು ಈ ಕಂಪನಿಯಿಂದ ಬದುಕು ಕಳೆದುಕೊಳ್ಳುವಂತ್ತಾಗಿದೆ ಎಂಬುದಾಗಿ ಯುಪಿಸಿಎಲ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಲೋಕಯ್ಯ ಹೇಳಿದ್ದಾರೆ.

ಕಂಪನಿಯ ನೂರಾರು ಕಾರ್ಮಿಕರು ಕರ್ತವ್ಯಕ್ಕೆ ಗೈರಾಗಿ ಕಂಪನಿಯ ಮುಖ್ಯ ದ್ವಾರದ ಮುಂಭಾಗ ಜಮಾಯಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತ್ತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕರಿಗೆ ಕನಿಷ್ಠ ವೇತನ, ವಾರ್ಷಿಕ 15 ಶೇಕಡ ಸಂಬಳ ಏರಿಕೆ, ಹೆಚ್ಚುವರಿಕೆ ಕೆಲಸ ಮಾಡಿಸಿದರೆ ಹೆಚ್ಚುವರಿ ಭತ್ಯೆ, ಕಂಪನಿಯೋಳಗೆ ಅಫಘಾತದಿಂದ ತೊಂದರೆಯಾದರೆ ಆಸ್ಪತ್ರೆ ವೆಚ್ಚ, ಮೃತಪಟ್ಟರೆ ಕುಟುಂಬಕ್ಕೆ 30ಲಕ್ಷ ಪರಿಹಾರ ಹೀಗೆ ಹತ್ತಾರು ಬೇಡಿಕೆಗಳ ಪಟ್ಟಿಯನ್ನು ಕಂಪನಿಯ ಅಧಿಕಾರಿಗಳಿಗೆ ಕಾರ್ಮಿಕರು ಹಸ್ತಾಂತರಿಸಿದ್ದಾರೆ. ಈ ಪತ್ರಕ್ಕೆ ಸ್ಪಂಧಿಸಿದ ಅಧಿಕಾರಿ ನೀವು ನೀಡಿದ ಮನವಿಯನ್ನು ಕಂಪನಿಯ ಮುಖ್ಯಸ್ಥರಾದ ಕಿಶೋರ್ ಆಳ್ವ ಮುಂದಿನ ಶನಿವಾರ ಊರಿಗೆ ಬರಲಿದ್ದು ನಿಮ್ಮ ಬೇಡಿಕೆಗಳ ಪಟ್ಟಿಯನ್ನು ಅವರಿಗೆ ತಲುಪಿಸಿ ಸಮಸ್ಯೆ ಇತ್ಯಾರ್ಥಕ್ಕೆ ಯತ್ನಿಸಲಾಗುವುದೆಂದರು.

Related posts

Leave a Reply

Your email address will not be published. Required fields are marked *