Header Ads
Header Ads
Breaking News

ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಪ್ರತಿಭಟನೆ : ಪುತ್ತೂರಿನ ಮಿನಿ ವಿಧಾನಸೌಧ ಎದುರಿನ ಕಿಲ್ಲೆ ಮೈದಾನದಲ್ಲಿ ನಡೆದ ಪ್ರತಿಭಟನೆ

ಕಾನೂನು ಬಾಹಿರವಾಗಿ, ಕಾನೂನು ಉಲ್ಲಂಘಿಸಿ, ದಾಖಲೆ ಇಲ್ಲದೆ ಕೇವಲ ಅಧಾರ್ ಪ್ರತಿಯನ್ನು ಪಡೆದು ಅಧಿಕ ಬಡ್ಡಿ ವಿಧಿಸಿ ಕೈಸಾಲದಂತೆ ನೀಡಿದ ಫೈನಾನ್ಸ್ ಗಳ ಸಾಲಗಳನ್ನು ಮನ್ನಾ ಮಾಡಬೇಕು, ಸರಕಾರಿ ಬ್ಯಾಂಕ್‌ಗಳಿಂದ ಬಡಜನತೆಗೆ ಸಾಲ ಸಿಗುವಂತಾಗಬೇಕು ಸಾಲಗಾರರಿಗೆ ಬೆದರಿಕೆ ಮೊದಲಾದ ದುರ್ನಡತೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ಪುತ್ತೂರಿನ ಮಿನಿ ವಿದಾನ ಸೌಧದ ಎದುರಿನ ಕಿಲ್ಲೆ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ, ಪುತ್ತೂರು ತಾಲೂಕು ಋಣಮುಕ್ತ ಹೋರಾಟ ಸಮಿತಿ, ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ವತಿಯಿಂದ, ಬೃಹತ್ ಪ್ರತಿಭಟನೆ ನಡೆಯಿತು.

ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಸಾಲ ನೀಡಿ ದೌರ್ಜನ್ಯವೆಸಗುವ ಮೈಕ್ರೋ ಫೈನಾನ್ಸ್ ಗಳ ಅಕ್ರಮ, ಕಾನೂನುಬಾಹಿರ ವರ್ತನೆಗಳ ವಿರುದ್ದ ಕಠಿಣ ಕ್ರಮ ಕೈಗೋಳ್ಳಬೇಕು, ಕಾನೂನು ಬಾಹಿರವಾಗಿ ನಡೆದ ಈ ಸಾಲ ವ್ಯವಹಾರಗಳನ್ನ ಖಾಸಗಿ ಕಾನೂನು ಉಲ್ಲಂಘನೆಯ ಸಾಲಗಳೆಂದು ಪರಿಗಣಿಸಿ ಋಣಮುಕ್ತ ಕಾಯಿದೆಯೋಳಗೆ ಸೇರಿಸಿ ಬಡವರ ಸಾಲ ಮನ್ನಾ ಮಾಡಬೇಕು, ಸಾಲ ವಸೂಲಾತಿಗೆ ನಡೆಸುವ ಮಾನಸಿಕ ಭಯೋತ್ಪಾದನೆಯನ್ನು ತಡೆಯಬೇಕು, ಲಕ್ಷಾಂತರ ಕೋಟಿ ರೂಗಳ ಹಣದ ವ್ಯವಹಾರ ನಡೆಸುವ ಈ ಫೈನಾನ್ಸ್‌ಗಳ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಸಂಚಾಲಕ ಬಿ.ಯಮ್ ಭಟ್, ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಗುಡ್ಡಪ್ಪ ಗೌಡ, ಸಿಐಟಿಯು ಬೆಳ್ತಂಗಡಿ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು ಮತ್ತಿತರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *