Header Ads
Breaking News

ವಿವಿಧ ಬೇಡಿಕೆ ಈಡೇರಿಸುವಂತೆ ಆಂಟನಿ ವೇಸ್ಟ್ ಕಾರ್ಮಿಕರಿಂದ ಪ್ರತಿಭಟನೆಗೆ ನಿರ್ಧಾರ

ಮಂಗಳೂರು ಮಹಾನಗರದ ಕಸ ತೆಗೆಯುವ ಗುತ್ತಿಗೆ ಪಡೆದ ಆಂಟನಿ ವೇಸ್ಟ್‍ನ ಕಾರ್ಮಿಕರು ಮತ್ತೆ ನಾಳೆ ಮುಷ್ಕರ ನಡೆಸಲಿದ್ದಾರೆ. ನಾಳೆ ಮತ್ತೆ ಮಂಗಳೂರಿನ ಕಸ ತೆಗೆಯುವ ಪ್ರಕ್ರೀಯೆ ನಡೆಯುವುದಿಲ್ಲ. ಡಿಸೆಂಬರ್ 17ರಂದು ಕಾರ್ಮಿಕರ ಪ್ರತಿಭಟನೆ ವೇಳೆ ಸಲ್ಲಿಸಿದ್ದ ಒಟ್ಟು 12 ಬೇಡಿಕೆಗಳಲ್ಲಿ ಕೇವಲ ಒಂದನ್ನು ಮಾತ್ರ ಈಡೇರಿಸಲಾಗಿದೆ. ಉಳಿದವುಗಳ ಬಗ್ಗೆ ಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.ದಿನದ ಕೆಲಸದ ಅವಧಿಯಲ್ಲಿ ಎಂಟು ಗಂಟೆಗೆ ನಿಗಧಿಪಡಿಸಬೇಕು. ಹೆಚ್ಚುವರಿ ಕೆಲಸ ಮಾಡಿದರೆ ಸರಕಾರದ ನಿಯಮದ ಪ್ರಕಾರ ಓಟಿ ನೀಡಬೇಕು. ಕಾರ್ಮಿಕರ ವಿರುದ್ಧ ದಬ್ಬಾಳಿಕೆ ಮಾಡಿದ ಸೂಪರ್‍ವೈಸರ್ ಅವರ ಮೇಲೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹಣಕಾಸು ದುರ್ಬಳಕೆ ಮಾಡಿದ ಸೂಪರ್‍ವೈಸರ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಇಎಲ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದ್ರು.

Related posts

Leave a Reply

Your email address will not be published. Required fields are marked *