Header Ads
Breaking News

ವಿಶೇಷ ಅತಿಥಿ ಉಪನ್ಯಾಸ : ಉತ್ತಮ ಜೀವನ ಶೈಲಿಯಲ್ಲಿ ರಸಾಯನ ಶಾಸ್ತ್ರದ ಪಾತ್ರ ಮಹತ್ತರವಾದುದು: ಡಾ. ನಂಬೂದಿರಿ

ನಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸುವಲ್ಲಿ ರಸಾಯನ ಶಾಸ್ತ್ರ ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬಯಿಯ ರಸಾಯನ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಐ  ಏನ್ ಏನ್ ನಂಬೂದಿರಿ ಇವರು ಹೇಳಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗವು ಬಿಎಸ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ “ನಿತ್ಯ ಜೀವನದಲ್ಲಿ ರಸಾಯನ ಶಾಸ್ತ್ರ” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದರು.

ನಮ್ಮ ದೇಹದಲ್ಲಿರುವ ಬೇರೆ ಬೇರೆ ರಾಸಾಯನಿಕ ವಸ್ತುಗಳು, ದೇಹದ ಬೆಳವಣಿಗೆಯಲ್ಲಿ ಅವುಗಳ ಪಾತ್ರ ಇರುವ ಅಂಶಗಳ ಬಗ್ಗೆ ತಿಳಿಸುತ್ತ, ನಾವು ಉಪಯೋಗಿಸುವ ಔಷಧಿಗಳು, ಅವುಗಳ ತಯಾರಿಕಾ ವಿಧಾನ, ಔಷಧೀಯ ಗುಣಗಳು, ಅದರಿಂದಾಗುವ ಉಪಯೋಗಗಳು ಮತ್ತು ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು. ನಮ್ಮ ದೇಶದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್  ಟೆಕ್ನಾಲಜಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್  ಸೈನ್ಸ್ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿ, ಅದರಲ್ಲಿ ಪ್ರವೇಶ ಪಡೆಯಲು ಬೇಕಾಗುವ ಅರ್ಹತೆಗಳ ಬಗ್ಗೆ ತಿಳಿಸುತ್ತಾ , ವಿದ್ಯಾರ್ಥಿಗಳಿಗೆ ಅದರಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುವಂತೆ ಕರೆ ನೀಡಿದರು. ಆ ಸಂಸ್ಥೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತಾ, ಇಂದಿನಿಂದಲೇ ಸತತ ಪ್ರಯತ್ನ ಮತ್ತು ಪರಿಶ್ರಮ ಪಟ್ಟು ಉನ್ನತ ವ್ಯಾಸಂಗಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬಯಿ ಗೆ ಬರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕೊನೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ತಮ್ಮ ಸಂದೇಹಗಳಿಗೆ ಅವರಿಂದ ಸೂಕ್ತ ಪರಿಹಾರ ಪಡೆದುಕೊಂಡರು.

ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಪಿ., ಎಸ್  ಡಿ  ಎಂ  ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಪ್ರೊ. ಬಿ ಎಸ್  ಹೊಳ್ಳ, ವಿಭಾಗದ ಉಪನ್ಯಾಸಕರಾದ ನಂದಾಕುಮಾರಿ ಕೆ ಪಿ., ದಿವ್ಯ, ಗಾನವಿ, ಸಂಗೀತ ಮತ್ತು ಡಾ. ನಾರಾಯಣ ಹೆಬ್ಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ರಾಜೇಶ ಹೆಗಡೆ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಂಧ್ಯಾ ಎಂ ನಿರೂಪಿಸಿ, ದೀಪಾ ಬಿ ಅತಿಥಿಗಳನ್ನು ಪರಿಚಯಿಸಿ, ಅನುರಾಧ ಸ್ವಾಗತಿಸಿ, ಈಡೆನ್ ಸಿಂಚನಾ ವಂದಿಸಿದರು.

Related posts

Leave a Reply

Your email address will not be published. Required fields are marked *