Header Ads
Header Ads
Breaking News

“ವಿಶ್ವ ಬಾಲ ಕಾರ್ಮಿಕ” ಪದ್ಧತಿ ವಿರೋಧಿ ಕಾರ್ಯಕ್ರಮ

 ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ಮತ್ತು ಕಾನೂನು ಅರಿವು ನೆರವು ಕಾರ್ಯಾಗಾರವನ್ನು ಮಂಗಳೂರಿನ ಪುರಭವನವನ್ನು ಆಯೋಜಿಸಲಾಯಿತ್ತು. ಇನ್ನು ಸಭಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಜಿ.ಗಂಗಾಧರ್ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು , ದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಬೇಕು. ನಗರ ಪ್ರದೇಶದಲ್ಲಿ ಯಾವುದೇ ಬಾಲ ಕಾರ್ಮಿಕರು ಇಲ್ಲದೇ ಹೆಮ್ಮೆ ಸಂಗತಿ ಎಂದು ತಿಳಿಸಿದ್ರು. ಈ ವೇಳೆ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್ , ಡಿಸಿಪಿ ಹನುಮಂತರಾಯ, ಪಡಿ ಸಂಸ್ಥೆ ನಿರ್ದೇಶಕ ರೆನ್ನಿ ಡಿಸೋಜಾ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್ ಮತ್ತಿತರರು ಉಪಸ್ಥಿತಿರಿದ್ದರು. ಇದಕ್ಕೂ ಮೊದ್ಲು ಮಂಗಳೂರು ನಗರದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ಪ್ರಯುಕ್ತ ಜಾಗೃತಿ ಜಾಥಾ ನಡೆಯಿತು.    

 

Related posts

Leave a Reply