Header Ads
Breaking News

ವಿಷ್ಣುಪಾದ ಸೇರಿದ ಎಡನೀರು ಶ್ರೀಪಾದರು : ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ

ಎಡನೀರು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಶ್ರೀ ಕೇಶವಾನಂದ ಭಾರತೀ ತೀರ್ಥ ಮಹಾಸ್ವಾಮಿಗಳು ವಿಷ್ಣುಪಾದ ಸೇರಿದ್ದಾರೆ. ಅವರ ದಿವ್ಯಾತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿ ಉಡುಪಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.ಎಸ್‍ಎಮ್‍ಎಸ್‍ಪಿ ಸಂಸ್ಕøತ ಮಹಾವಿದ್ಯಾಲಯ ಮತ್ತು ಉಡುಪಿಯ ನಾಗರಿಕರು, ಶ್ರೀಗಳ ಅಭಿಮಾನಿಗಳ ವತಿಯಿಂದ ಶ್ರದ್ಧಾಂಜಲಿ ಸಭೆಯು ಕಾಲೇಜಿನ ಆವರಣದಲ್ಲಿ ನಡೆಯಿತು . ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಎಡನೀರು ಶ್ರೀಗಳ ಅಧ್ಯಾತ್ಮಿಕ , ಸಾಂಸ್ಕೃತಿಕ , ಶೈಕ್ಷಣಿಕ ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳನ್ನು ಹಾಗೂ ಉಡುಪಿಯ ಮಠಗಳು ಸಂಸ್ಕøತ ಕಾಲೇಜಿನೊಂದಿಗಿನ ಬಾಂಧವ್ಯವನ್ನು ಸ್ಮರಿಸಿ ಅವರ ಆದರ್ಶಗಳು ನಮಗೆಲ್ಲ ಸದಾ ಮಾರ್ಗದರ್ಶಕವಾಗಲಿ. ಅವರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು .

ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಪ್ರಾಚಾರ್ಯ ಡಾ.ಎನ್‍ಎಲ್‍ಭಟ್, ಪೇಜಾವರ ಮಠದ ದಿವಾನ ಎಂ ರಘುರಾಚಾರ್ಯ, ಉದ್ಯಮಿ ಯಶ್ ಪಾಲ್ ಸುವರ್ಣ, ಉಡುಪಿ ಸಾಮಾಜಿಕ ಅರಣ್ಯ ವಿಭಾಗ ವಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *