Header Ads
Header Ads
Breaking News

ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್- 2 : ಜುಲೈ 21ರಂದು ಗ್ರ್ಯಾಂಡ್ ಫಿನಾಲೆ

 ಕಾಮಿಡಿ ಪ್ರೀಮಿಯರ್ ಲೀಗ್. ಈಗಾಗಲೇ ಕರಾವಳಿ ಕರ್ನಾಟಕದ ಜನರ ಮನೆಮಾತಾಗಿರುವ ಹೆಸರು. ವಿಭಿನ್ನ ಕಾನ್ಸೆಪ್ಟ್ ಮೂಲಕ ಆರಂಭಗೊಂಡು ಹಲವಾರು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ ಕಾಮಿಡಿ ಪ್ರೀಮಿಯರ್ ಲೀಗ್ ಅಂದರೆ ಸಿಪಿಎಲ್ ಎರಡು ಸೀಸನ್‌ಗಳಲ್ಲಿ ಭ೦ರ್ಜರಿ ಯಶಸ್ಸನ್ನು ಗಳಿಸಿದೆ. ಸೀಸನ್ 2ನಲ್ಲಿ ತುಳುನಾಡಿನ ಜನರನ್ನು ನಕ್ಕುನಗಿಸುತ್ತಾ ಇದೀಗ ಫೈನಲ್ ಹಂತಕ್ಕೆ ತಲುಪಿದೆ. ಸಿಪಿಎಲ್ ಸೀಸನ್ 2ನ ಜರ್ನಿಯ ಬಗ್ಗೆ ಸ್ಮಾಲ್ ಡೀಟೇಲ್ಸ್ ಇಲ್ಲಿದೆ ನೋಡಿ.

 ಕಾಮಿಡಿ ಪ್ರೀಮಿಯರ್ ಲೀಗ್. ಕರಾವಳಿಯ ಮಾಧ್ಯಮ ಲೋಕದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸಿ, ಮುನ್ನುಡಿ, ಮುನ್ನಡೆಗಾಗಿ ಎನ್ನುವ ಧ್ಯೇಯೋದ್ದೇಶದೊಂದಿಗೆ ಮುನ್ನಡೆಯುತ್ತಿರುವ ವಿ4 ನ್ಯೂಸ್ 24X7 ಅತ್ಯಂತ ಜನಪ್ರಿಯ ಕಾರ್ಯಕ್ರಮ. ಐಪಿಎಲ್ ಕ್ರಿಕೆಟ್ ಟೂರ್ನಿ ಮಾದರಿಯಲ್ಲಿ ನಡೆಯುತ್ತಿರುವ ಕಾಮಿಡಿ ಪ್ರೀಮಿಯರ್ ಲೀಗ್ ಅಂದರೆ ಸಿಪಿಎಲ್ ಮೊದಲ ಸೀಸನ್‌ನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಎರಡನೇ ಸೀಸನ್ ಕೂಡ ಭರ್ಜರಿಯಾಗಿ ನಡೆಯುತ್ತಿದ್ದು, ಇದೀಗ ಫೈನಲ್ ಹಂತವನ್ನು ಪ್ರವೇಶಿಸಿದೆ. ಇದೇ ಜುಲೈ 21ರಂದು ಅಪರಾಹ್ನ 2 ಗಂಟೆಗೆ ಮಂಗಳೂರು ಹೊರವಲಯದ ಬೈಕಂಪಾಡಿಯ ಇಂದಿರಾ ಮಾಧನ ವಿದ್ಯಾರ್ಥಿ ಭವನದಲ್ಲಿ ಸಿಪಿಎಲ್ ಸೀಸನ್ 2ನ ಫೈನಲ್ ನಡೆಯಲಿದೆ.

 ವಿ4 ನ್ಯೂಸ್ 24X7 ಆಶ್ರಯದಲ್ಲಿ ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಭಾಗಿತ್ವದಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2 ನಡೆದುಕೊಂಡು ಬಂದಿದೆ. ಎ ಮತ್ತು ಬಿ ಎನ್ನುವ ಎರಡು ಪೂಲ್‌ಗಳ ಮೂಲಕ ಒಟ್ಟು 12 ಕಾಮಿಡಿ ತಂಡಗಳ ನಡುವೆ ಹಣಾಹಣಿ ನಡೆದಿದೆ. ಎ ಪೂಲ್‌ನಲ್ಲಿ ಪ್ಲಾನೆಟ್ ಜಿ ವೈಷ್ಣವಿ, ವಿನು ತೆಲಿಕೆದ ತೆನಾಲಿ, ಬಿಯುಮೋಂಡ್ ರಾಜಶ್ರೀ ಕುಡ್ಲ ಮತ್ತು ಮತ್ತು ಮುನೀಶ್ ಕುಡ್ಲ ಕುಸಾಲ್, ಕುಂಬ್ಳೆ ಸೋಲಾರ್ ಜೈಮಾತಾ, ಮತ್ತು ಫ್ಲಾಂಟ್ ತೃಪ್ತಿ ಕಲಾವಿದರು ತಂಡಗಳು ಪಾಲ್ಗೊಂಡಿದ್ದು, ಈ ಪೈಕಿ ಪ್ಲಾನೆಟ್ ಜಿ ವೈಷ್ಣವಿ, ವಿನು ತೆಲಿಕೆದ ತೆನಾಲಿ, ಬಿಯುಮೋಂಡ್ ರಾಜಶ್ರೀ ಕುಡ್ಲ ಮತ್ತು ಮತ್ತು ಮುನೀಶ್ ಕುಡ್ಲ ಕುಸಾಲ್ ತಂಡಗಳು ಫೈನಲ್ ಪ್ರವೇಶಿಸಿವೆ. ಬಿ ಪೂಲ್‌ನಲ್ಲಿ ಎಸ್ಸೆನ್ ವಿರ್ಗೋ ಫ್ರೆಂಡ್ಸ್, ಕಾರ್ ಡೆಕೋರ್ ಹರಿಣಿ, ಗೋಹೀಲ್ ಸಾಕ್ಷಿ, ವಿಎನ್‌ಆರ್ ಗೋಲ್ಡ್ ಬಂಗಾರ್ ಬಂಟ್ವಾಳ, ಹೆವನ್‌ರೋಸ್ ಪೋಪಿ ಮತ್ತು ಯುಎಂ ರೆನಿಗೇಡ್ ವಿಷ್ಣು ಕಲಾವಿದರು ಎನ್ನುವ ತಂಡಗಳು ಭಾಗವಹಿಸಿದ್ದು, ಈ ಪೈಕಿ ಎಸ್ಸೆನ್ ವಿರ್ಗೋ ಫ್ರೆಂಡ್ಸ್, ಕಾರ್ ಡೆಕೋರ್ ಹರಿಣಿ, ಗೋಹೀಲ್ ಸಾಕ್ಷಿ, ವಿಎನ್‌ಆರ್ ಗೋಲ್ಡ್ ಬಂಗಾರ್ ಬಂಟ್ವಾಳ ತಂಡಗಳು ಫೈನಲ್ ಪ್ರವೇಶಿಸಿವೆ.

 ಫೈನಲ್‌ನಲ್ಲಿ ಒಟ್ಟು 8 ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ತುಳುನಾಡಿನ ಖ್ಯಾತ ರಂಗಕಲಾವಿದರು, ನಟರು, ನಿರ್ದೇಶಕರ ಸಮ್ಮುಖದಲ್ಲಿ ತಂಡಗಳು ಪ್ರದರ್ಶನ ನೀಡಲಿದ್ದು, ರೋಚಕ ಕಾಮಿಡಿ ಪಂದ್ಯಾಟಕ್ಕೆ ತುಳುನಾಡು ಸಾಕ್ಷಿಯಾಗಲಿದೆ. ಈ ಮೂಲಕ ಕಾಮಿಡಿ ಪ್ರೀಮಿಯರ್ ಲೀಗ್‌ನ ಚಾಂಪಿಯನ್ಸ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಲಭಿಸಲಿದೆ.

Related posts

Leave a Reply

Your email address will not be published. Required fields are marked *