Header Ads
Header Ads
Breaking News

ವೆನ್ಲಾಕ್ ಆಸ್ಪತ್ರೆಯಲ್ಲಿ ರಾಷ್ಟೀಯ ಆಯುರ್ವೇದ ದಿನಾಚರಣೆ

ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನವೆಂಬರ್5 ರಂದು ನಡೆಯಿತು.ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಾರತವು ಆಯುರ್ವೇದವನ್ನು ಇಡೀ ಪ್ರಪಂಚಕ್ಕೆ ಸಾರಿದೆ. ಭಾರತ ಮೂಢನಂಬಿಕೆಯ ರಾಷ್ಟ್ರವಲ್ಲ ಮೂಲ ನಂಬಿಕೆಯ ರಾಷ್ಟ್ರ ಎಂದರು.

ಉಡುಪಿ ಕುತ್ಪಾಡಿ, ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ ಜಿ. ಶ್ರೀನಿವಾಸ ಆಚಾರ್ಯರವರು ವಿಶೇಷ ಉಪನ್ಯಾಸವನ್ನು ನೀಡಿ ಆಯುರ್ವೇದ ಚಿಕಿತ್ಸೆಯಿಂದ ರೋಗಗಳು ಗುಣಮುಖವಾಗುತ್ತದೆ. ಆಯುರ್ವೇದದ ಜನ್ಮಸ್ಥಳವೇ ಭಾರತ ಎಂದರು. ಈ ಸಂದರ್ಭ ವೆನ್ಲಾಕ್ ಆಸ್ಪತ್ರೆಯ ಆಯುರ್ವೇದ ವಿಭಾಗದಲ್ಲಿ ಹೊರ ರೋಗಿಗಳಿಗೆ ಉಚಿತ ವ್ಯೆಧ್ಯಕೀಯ ತಪಾಸಣೆ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೊನು, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ ರಾಜೇಶ್ವರಿದೇವಿ ,ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply