Header Ads
Breaking News

ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳವ ಮೂಲಕ ಪ್ರತಿಭೆಗಳ ಅನಾವರಣ : ಚಿತ್ರನಟ ಅರವಿಂದ ಬೋಳಾರ್ ಕಿವಿಮಾತು

ಎಳವೆಯಲ್ಲಿಯೇ ಮಕ್ಕಳ ಪ್ರತಿಭೆಯನ್ನು ಪಾಲಕರು ಗುರುತಿಸಿ, ಅವಕಾಶ ಸಿಕ್ಕಾಗ ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ಮಕ್ಕಳ ಸೂಕ್ತ ಪ್ರತಿಭೆಯನ್ನು ಅನಾವಣಗೊಳಿಸಬೇಕಾಗಿದೆ ಎಂದು ಚಿತ್ರನಟ ಅರವಿಂದ ಬೋಳಾರ್ ಹೇಳಿದ್ದಾರೆ.ಅವರು ಪಡುಬಿದ್ರಿ ಸುಜಾತಾ ಅಡಿಟೋರಿಯಂನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಪಡುಬಿದ್ರಿ ಇನ್ನರ್ ಮೀಲ್ ಕ್ಲಬ್ ಜಂಟಿ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು. ಈಗ ಮೊಬೈಲ್ ಯುಗ. ಮಕ್ಕಳಿಗೆ ಮೊಬೈಲ್‍ನಿಂದಲೇ ಪಾಠ ಪ್ರವಚನ ನಡೆಯುತ್ತದೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಿಶ್ಚಿಂತೆಯಿಂದ ಇರಬೇಡಿ. ಮಕ್ಕಳು ನಿಜವಾಗಿಯೂ ಪಾಠ ಪ್ರವಚನದಲ್ಲಿ ಮಗ್ನರಾಗಿದ್ದಾರೆಯೇ ಎಂದು ನೋಡಿಕೊಳ್ಳಿ ಎಂದು ಹೇಳಿದ್ದಾರೆ.ಈ ಸಂದರ್ಭ ಸಾರ್ವಜನಿಕ ಹಾಗೂ ಮಕ್ಕಳಿಂದ ಪ್ರತಿಭಾ ಸಮ್ಮಿಲನ ನಡೆಯಿತು.ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ ಸಾಲ್ಯಾನ್, ಇನ್ನರ್ ಮೀಲ್ ಅಧ್ಯಕ್ಷ ಆಶಾ ಸುಕುಮಾರ್, ವೈ ಸುಧೀರ್ ಕುಮಾರ್, ನವೀನ್ ಅಮೀನ್ ಶಂಕರಪುರ, ನವೀನ್ ಚಂದ್ರ ಜೆ. ಶೆಟ್ಟಿ, ರಮೀಜ್ ಹುಸೈನ್, ಹಮೀದ್ ಪಡುಬಿದ್ರಿ, ಸಂತೋಷ್ ಕುಮಾರ್ ಪಡುಬಿದ್ರಿ, ಚಿತ್ರನಟ ರಂಜಿತಾ ಶೇಠ್, ಹಿನ್ನಲೆಗಾಯಕ ಚಂದ್ರಕಾಂತ್ ಆಚಾರ್ಯ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *