Header Ads
Breaking News

ವೈದ್ಯಕೀಯ ಕ್ಷೇತ್ರದಲ್ಲಿ ರೂಹಿ ರಫೀಕ್‍ರಿಂದ ವಿಶೇಷ ಸಾಧನೆ : ಬ್ರದರ್ಸ್ ಮನಿಮುಂಡ ವತಿಯಿಂದ ಸನ್ಮಾನ

ಮಂಜೇಶ್ವರ : ಮಂಗಳೂರು ದೇರಳ ಕಟ್ಟೆ ನಿಟ್ಟೆ ವಿಶ್ವವಿದ್ಯಾಲಯದಿಂದ ಉತ್ತಮ ಅಂಕಗಳೊಂದಿಗೆ ಬಿಡಿಎಸ್ ಪೂರ್ತೀಕರಿಸಿದ ಸ್ಥಳೀಯ ನಿವಾಸಿಯಾದ ವೈದ್ಯೆಯನ್ನು ಹಾಗೂ ಸಾಮಾಜಿಕ ಕಾರ್ಯಕರ್ತ ಸಫರುಲ್ಲಾ ಎಸ್ ಆಹ್ಮದ್ ರನ್ನು ಉಪ್ಪಳ ಬ್ರದರ್ಸ್ ಮಣಿಮುಂಡ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಉಪ್ಪಳ ವ್ಯಾಪಾರ ಭವನ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾ. ಪಂ. ಅಧ್ಯಕ್ಷ ಶಾಹುಲ್ ಹಮೀದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರೂಹಿ ರಫೀಕ್ ನಮ್ಮ ನಾಡಿಗೆ ಹೆಮ್ಮೆಯಾಗಿದ್ದಾರೆ. ವೈದ್ಯಕೀಯ ಸೇವೆಯಲ್ಲಿ ಆಕೆ ಮಾಡಿದ ಸಾಧನೆ ಶ್ಲಾಘನೀಯ ನಮ್ಮ ನಾಡಿಗೆ ಈಕೆ ಮಾದರಿಯಾಗಿದ್ದಾಳೆ ಇಂತಹ ವೈದ್ಯರು ಇನ್ನಷ್ಟು ಮಂದಿ ಬರಲಿ ಎಂದು ಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವೈದ್ಯೆ ರೂಹಿ ರಫೀಕ್ ನಮ್ಮ ಯುವ ಸಮೂಹಕ್ಕೆ ಎತ್ತರಕ್ಕೆ ಬೆಳೆಯಲು ಅದೆಷ್ಟೋ ಸುಲಭ ದಾರಿಗಳಿವೆ ಅಂತಹ ಎತ್ತರಕ್ಕೆ ಜೀವನದಲ್ಲಿ ಬೆಳೆಯಬಹುದಾದಂತಹ ಅವಕಾಶಗಳು ಕೂಡಾ ನಮ್ಮ ಕಣ್ಣೆದುರಿನಲ್ಲೇ ಇದೆ. ಅದನ್ನು ಸಾಧಿಸಿ ನಾವು ನಮ್ಮ ತಂದೆ ತಾಯಿ ಹಾಗೂ ಊರವರಿಗೆ ಕೀರ್ತಿಯನ್ನು ತರಬೇಕೆಂಬುದಾಗಿ ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಅಝೀಂ ಮಣಿಮುಂಡ ರವರು ಮಾತನಾಡಿ  ನಮ್ಮ ನಾಡಿಗೆ ವೈದ್ಯೆಯಾಗಿ ಕೀರ್ತಿಯನ್ನು ತಂದ ರೂಹಿ ರಫೀಕ್ ನಮ್ಮ ನಾಡಿನ ಹೆಮ್ಮೆಯಾಗಿದ್ದಾಳೆ. ಅಕೆಯನ್ನು ನಾನು ನನ್ನ ಪರವಾಗಿಯೂ, ಕ್ಲಬ್ ನ ಪರವಾಗಿಯೂ ಅದೇ ರೀತಿ ಊರವರ ಪರವಾಗಿಯೂ ಅಭಿನಂದಿಸುತಿದ್ದೇನೆ. ಅಕೆಯ ತಂದೆ ತಾಯಿಯವರು ನೀಡಿದ ಪ್ರೋತ್ಸಾಹದಿಂದ ಇಂದು ರೂಹಿ ರಫೀಕ್ ಒಬ್ಬ ವೈದ್ಯೆಯಾಗಿ ಹೊರಬಂದಿದ್ದಾರೆ. ಇದೇ ರೀತಿ ನಮ್ಮ ಊರಿನ ಇತರ ತಂದೆ ತಾಯಿಯವರು ಕೂಡಾ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದೊಂದಿಗೆ ಅವರಿಗಿರುವ ಅಭಿರುಚಿಗೆ ತಕ್ಕ ಪ್ರೋತ್ಸಾಹವನ್ನು ನೀಡಿ ಅವರನ್ನು ಒಂದು ಸ್ಥಾನಕ್ಕೆ ತಲುಪಿಸಲು ಪ್ರಯತ್ನಿಸಬೇಕೆಂಬುದಾಗಿ ಅವರು ವಿನಂತಿಸಿ ಕೊಂಡರು.

ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷತೆ ಫರೀದಾ ಸಾಕಿರ್ ಮುಖ್ಯ ಅತಿಥಿಯಾಗಿದ್ದರು.ಈ ಸಂದರ್ಭ ಮಂಗಲ್ಪಾಡಿ ಗ್ರಾ. ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಬಿ ಎಂ ಮುಸ್ತಫ , ಪಂ. ಸದಸ್ಯೆ ಝೀನತ್ ಝಕರಿಯ್ಯ, ಅಶ್ರಫ್ ರಂಜಾನ್, ಹಾಜಿ ನೂರ್ ಮೊಹಮ್ಮದ್, ಇಸ್ಮಾಯಿಲ್ ಅಬೂಬಕ್ಕರ್, ಶಬೀರ್ ಇಸ್ಮಾಯಿಲ್, ಸಿಶಾನ್, ಅಪೀಝ್ ರಹ್ಮಾನ್, ಮೊಹಮ್ಮದ್ ರಫೀಕ್, ರೇಶ್ಮಾ ರಫೀಕ್, ಅಬ್ದುಲ್ ಅಝೀಝ್, ಝುಬೈರ್, ಮೊಹಮ್ಮದ್ ಮುಸ್ ಹಬ್, ಮೊಹಮ್ಮದ್ ಶಿಯಾನ್, ಮೊದಲಾದವರು ಉಪಸ್ಥಿತರಿದ್ದರ.

Related posts

Leave a Reply

Your email address will not be published. Required fields are marked *