Header Ads
Header Ads
Header Ads
Header Ads
Header Ads
Header Ads
Breaking News

ವೈದ್ಯರ ಕೈಯಲ್ಲಿ ಮೂಡಿಬಂದತಹ ಅದ್ಭುತ ಚಿತ್ರಕಲೆಗಳು

ಮಂಗಳೂರು: ಅಲ್ಲಿ ನೆರೆದಿದ್ದ ವೈದ್ಯರು ಸ್ಟೆತೊಸ್ಕೋಪ್ ಬಿಟ್ಟು ಪೈಂಟಿಂಗ್ ಬ್ರೇಷ್‌ಗಳನ್ನು ಹಿಡಿದಿದ್ರು, ಯಾವ ಚಿತ್ರಕಲಾಕಾರನಿಗೂ ಕಡಿಮೆ ಇಲ್ಲದ ರೀತಿಯಲ್ಲಿ ವೈದ್ಯರು ಬಿಡಿಸಿದ ಚಿತ್ರಗಳು ಕಣ್ಮನಸೆಳೆಯುತ್ತಿದ್ದವು. 

ಚಿಕಿತ್ಸೆಗಾಗಿ ನಾವು ಅದೇಷ್ಟೋ ಬಾರಿ ವೈದ್ಯರ ಬಳಿ ಹೋಗುತ್ತೇವೆ. ಅದೇಷ್ಟೋ ವೈದ್ಯರು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಅದ್ರೆ ವೈದ್ಯರು ತಮ್ಮ ಕೈ ಚಳಕದಿಂದ ಬಿಡಿಸಿದಂತಹ ಚಿತ್ರಕಲೆಗಳನ್ನು ನೋಡಲು ಇಂದು ಅನೇಕ ಜನ ಸೇರಿದ್ದರು. ಹೌದು ಮಂಗಳೂರಿನ ಮಿಲಾಗ್ರಿಸ್ ಸನೆಟ್ ಹಾಲ್‌ನಲ್ಲಿ ವೈದ್ಯರ ಕೈಯಲ್ಲಿ ಮೂಡಿಬಂದತಹ ಚಿತ್ರಕಲೆಗಳ ಆಲೇಕ್ ಎಂಬ ಆರ್ಟ್ ಎಕ್ಸಿಬಿಷನ್ ನೇರೆದಿದ್ದವರ ಮನಸೊರೆಗೊಂಡಿತು.

ಇನ್ನೂ ಈ ಕಾರ್ಯಕ್ರವನ್ನು ರಿಬ್ಬನ್ ಕತ್ತರಿಸಿ ದೀಪಬೆಳಗಿಸುವ ಮೂಲಕ ಮಿಲಾಗ್ರಿಸ್‌ನ ಪ್ಯಾರಿಷ್ ಪ್ರೀಸ್ಟ್ ಜೋಸೆಫ್ ಲೋಬೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ ಚಿತ್ರಕಲೆ ಎನ್ನುವುದು ಭಾವನೆಗಳನ್ನು ಬಳಗೊಂಡ ಕಲೆ, ವೈದ್ಯಲೋಕದಲ್ಲಿ ಇದೋಂದು ಸಾಧನೆಯಾಗಿದೆ ಎಂದರು.

ಬಳಿಕ ಮಾತನಾಡಿದ ಯೆನೆಪೊಯ ವಿಶ್ವವಿದ್ಯಾಲಯದ ಆರ್ಥೋಪಾಂಟಿಕ್ಸ್ ಮತ್ತು ಡೆನೆಟೊಫೇಶಿಯಲ್ ಆರ್ಥೋಪೆಡಿಕ್ಸ್ ವಿಭಾಗ ಮುಖ್ಯಸ್ಥರಾದ ಡಾ.ಅಕ್ಥರ್ ಹುಸೈನ್ ಮಾತನಾಡಿ ಚಿತ್ರಕಲೆ ಎಂಬುವುದು ಒಂದು ಅದ್ಭುತವಾದ ಕಲೆ ಅಂತಹಾ ಕಲೆಗಳನ್ನು ವೈದ್ಯರು ರಚಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂಧರ್ಭದಲ್ಲಿ ಗಣ್ಯರು ಪೈಂಟಿಂಗ್ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ೪೫ಕ್ಕೂ ಆಧಿಕ ವೈದ್ಯರ ಚಿತ್ರಕಲೆಗಳು ನೆರೆದವರ ಮನ ಗೆದ್ದಿತು. ಸದಾ ಜನರ ಸೇವೆಯನ್ನು ಮಾಡುತ್ತಿರುವ ವೈದ್ಯರು, ಕೇವಲ ವೈದ್ಯ ವೃತ್ತಿ ಅಲ್ಲದೆ ಇಂತಹ ಕಲೆಗಳಲ್ಲಿ ತಮ್ಮನ್ನು ತೋಡಗಿಸಿಕೊಂಡಿರುವುದು ವೈದ್ಯಲೋಕದ ಗರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಬಹುದು.

Related posts

Leave a Reply

Your email address will not be published. Required fields are marked *