Header Ads
Header Ads
Breaking News

ವ್ಯಕ್ತಿತ್ವ ವಿಕಸನದ ಕುರಿತು ವಿದ್ಯಾರ್ಥೀಗಳೋಡನೆ ಸಂವಾದ ನಡೆಸಿದ ಲೆಪ್ಟಿನೆಂಟ್ ಕರ್ನಲ್ ಗ್ರೇಶನ್ ಸಿಕ್ವೇರಾ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎನ್‌ಸಿಸಿ ವಿಂಗ್ಸ್ ಮತ್ತು ಯೂತ್ ರೆಡ್‌ಕ್ರಾಸ್ ಯುನಿಟ್‌ನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಕುರಿತು ಸಂವಾದ ಕಾರ್ಯಕ್ರಮ ಕಾಲೇಜಿನ ಎಲ್.ಎಫ್.ರೆಸ್ಕ್ಯೂನಿಯಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎನ್‌ಸಿಸಿ ಆರ್ಮಿವಿಂಗ್ 18 ಕನ್ನಡ ಬೆಟಾಲಿಯನ್‌ನ ಎಡ್ಮಿನಿಸ್ಟ್ರೇಟಿವ್ ಆಫಿಸರ್ ಲೆಪ್ಟಿನೆಂಟ್ ಕರ್ನಲ್ ಗ್ರೇಶನ್ ಸಿಕ್ವೇರಾ ಎನ್‌ಸಿಸಿ ವಿಂಗ್ಸ್ ಮತ್ತು ಯೂತ್ ರೆಡ್‌ಕ್ರಾಸ್ ಯುನಿಟ್‌ನ ವಿದ್ಯಾರ್ಥಿಗಳಿಗೆ ಆರ್ಮಿಯಲ್ಲಿ ಯಾವ ಯಾವ ಸೌಲಭ್ಯಗಳಿವೆ, ನಾವು ಆರ್ಮಿಗೆ ಸೇರಬೇಕಾದರೆ ನಮ್ಮ ವ್ಯಕ್ತಿತ್ವ ಹೇಗಿರಬೇಕು. ಶಿಸ್ತು ಮತ್ತು ದೇಹ ದಂಡನೆ ಹೇಗೆ ಮಾಡಬೇಕು ಎಂದು ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಮತ್ತು ಬಾಲ್ಯ ಜೀವನದ ಅನುಭವವನ್ನು ಹಂಚಿಕೊಂಡು ವ್ಯಕ್ತಿತ್ವ ವಿಕಸನದ ಕುರಿತು ವಿದ್ಯಾರ್ಥೀಗಳೋಡನೆ ಸಂವಾದ ನಡೆಸಿದರು.
ಈ ಸಂದರ್ಭ ಎನ್‌ಸಿಸಿ ಆರ್ಮಿ ಆಫಿಸರ್ ಲೆಫ್ಟಿನೆಂಟ್ ಕಿಶನ್ ರಾಜ್, ಲೆಫ್ಟಿನೆಂಟ್. ಹರಿಪ್ರಸಾದ್ ಶೆಟ್ಟಿ, ಸಿಟಿಒ. ಆಲ್ವಿನ್ ಮಿಸ್ಕತ್, ಯೂತ್ ರೆಡ್‌ಕ್ರಾಸ್‌ನ ಕಾರ್ಯಕ್ರಮ ಸಂಯೋಜಕರಾದ ಪ್ರೇಮಲತಾ ಶೆಟ್ಟಿ, ಅರ್ಜುನ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *