Header Ads
Breaking News

ವ್ಯವಹಾರ ಬಂದ್ ಮಾಡಿದ್ರೆ ನಮ್ಮ ನಷ್ಟಕ್ಕೆ ಹೊಣೆ ಯಾರು ಕಾರ್ಕಳದ ವ್ಯಾಪಾರಿಗಳ ಅಳಲು

ಕಾರ್ಕಳ ನಿನ್ನೆ ರಾತ್ರಿ ರಾಜ್ಯ ಸರಕಾರ ಮಾರಣಾಂತಿಕ ಕರೋನ ವೈರಸ್ ಸೋಂಕು ತಡೆಗೆ ಮುಂಜಾಗ್ರತ ಕ್ರಮವಾಗಿ ರಾಜ್ಯ ಸರಕಾರ ಇವತ್ತಿನಿಂದ ಒಂದು ವಾರದವರೆಗೆ ಜನರು ಒಂದೆಡೆ ಸೇರುವ ಸ್ಥಳಗಳನ್ನು ಬಂದ್ ಮಾಡುವಂತೆ ಸರಕಾರ ನಿರ್ಬಂಧನೆಗಳನ್ನು ಘೋಷಣೆ ಮಾಡಿದೆ. ಆದರೆ ಕಾರ್ಕಳದಲ್ಲಿ ವಾರದ ಸಂತೆ ಮಾತ್ರ ಎಂದಿನಿಂತೆ ನಡೆಯುತ್ತಿದೆ.

ಕಾರ್ಕಳದಲ್ಲಿ ಇಂದು ವಾರದ ಸಂತೆಯ ದಿನ ಆದ ಹಿನ್ನೆಲೆಯಲ್ಲಿ ಸರಕಾರದ ನಿರ್ಬಂಧ ಕಾರ್ಕಳದಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಕೋಳಿ ವ್ಯಾಪಾರಿ ಬಳಿ ಮಾತನಾಡಿಸಿದಾಗ ನಾವು ಈಗಾಗಲೇ ಲಕ್ಷಾಂತರ ರೂಪಾಯಿ ಸಾಲದಲ್ಲಿದ್ದೇವೆ. ನಾವು ಒಂದು ವಾರ ನಮ್ಮ ವ್ಯವಹಾರವನ್ನು ಬಂದ್ ಮಾಡಿದರೆ ನಮ್ಮ ನಷ್ಟಕ್ಕೆ ಯಾರು ಹೊಣೆ ಎಂದು ಹೇಳಿದರು. ಮೀನು ವ್ಯಾಪಾರಿಗಳು ಪ್ರತಿಕ್ರಿಯೆ ನೀಡಿ ಮೊದಲು ಪುರಸಭೆಯ ಸಿಬ್ಬಂದಿಗಳು ಮಾರುಕಟ್ಟೆಯಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ತೆಗೆದು ರೋಗ ಹರಡದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಿ ನಂತರ ಕೊರೊನಾ ರೋಗಾಣು ಬಗ್ಗೆ ತಿಳುವಳಿಕೆ ನೀಡಲಿ ಈಗಾಗಲೇ ಮೀನಿನ ವ್ಯಾಪಾರವಿಲ್ಲದ ಲಕ್ಷಗಟ್ಟಲೆ ರೂಪಾಯಿ ನಷ್ಟ ಅನುಭವಿಸಿದ್ದೇವೆ. ನಾವು ಸಂದರ್ಭದಲ್ಲಿ ನಮ್ಮ ವ್ಯಾಪಾರವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *