Header Ads
Breaking News

ಶಕ್ತಿನಗರದ ಸಾನಿಧ್ಯ ಶಾಲೆಯಲ್ಲಿ ದೀಪಾವಳಿ ಹಬ್ಬ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಸ್ಥಳೀಯ ವಿಶೇಷ ಮಕ್ಕಳು ಹಾಗೂ ಅವರ ಹೆತ್ತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷ ಶಿಕ್ಷಕರು ಪ್ರಾರ್ಥನೆ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಸಾನಿಧ್ಯದ ಆಡಳಿತ ಅಧಿಕಾರಿ ವಸಂತ್ ಕುಮಾರ್ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿದರು ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಮಾರ್ಲ ಖಜಾಂಚಿ ಜಗದೀಶ್ ಶೆಟ್ಟಿ ಹಾಗೂ ಟೀಮ್ ಸೇವಕ್ ಇದರ ಸದಸ್ಯರಾದ ಮಾಧವ ಸುವರ್ಣ ವಿಶೇಷ ಮಕ್ಕಳೊಂದಿಗೆ ಸೇರಿ ದೀಪವನ್ನು ಹಚ್ಚುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯಾಯಿತು. ಮಹಾಬಲ ಮಾರ್ಲ ರವರು ದೀಪಾವಳಿ ಹಬ್ಬದ ಸಂದೇಶ ನೀಡಿದರು. ಡಾಕ್ಟರ್ ಅನಂತ ಪ್ರಭು ಮತ್ತು ತಂಡದವರು ಈ ಸಂದರ್ಭದಲ್ಲಿ ವಿಶೇಷ ಮಕ್ಕಳಿಗೆ ಉಡುಗೊರೆಯಾಗಿ ಆಟಿಕೆಗಳನ್ನು ನೀಡಿದರು ವಿಶೇಷ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ವಿಶೇಷ ಮಕ್ಕಳು ತಮ್ಮ ಹೆತ್ತವರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಮಾಧವ ಸುವರ್ಣರವರು ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

Related posts

Leave a Reply

Your email address will not be published. Required fields are marked *