
ವಿಟ್ಲ: ಶತಮಾನೋತ್ಸವ ಸಂಭ್ರಮದಲ್ಲಿರುವ ಬಂಟ್ವಾಳ ತಾಲ್ಲೂಕಿನ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸುಮಾರು 20ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶತಾನಂದ ಸಭಾಭವನದ ಉದ್ಘಾಟನೆ, ಗ್ರಾಮದ ಪ್ರಮುಖ ರಸ್ತೆಗಳ ಮಾರ್ಗ ಸೂಚನಾ ಫಲಕಗಳ ಲೋಕಾರ್ಪಣೆ, ವಿದ್ಯಾ ಸಂಸ್ಥೆಗಳಿಗೆ ಕೊಡುಗೆಗಳ ವಿತರಣೆ ಕಾರ್ಯಕ್ರಮ ನ.23ರಂದು ಕೆದಿಲದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ. ಪದ್ಮನಾಭ ಭಟ್ಟ ಪೆರ್ನಾಜೆ ಹೇಳಿದರು.
ಅವರು ಮಂಗಳವಾರ ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 1918ರ ಸೆ.18ಕ್ಕೆ ನೊಂದಾವಣೆಯಾದ ಸಂಘ 1919ರಲ್ಲಿ ಕಾರ್ಯಾರಂಭಗೊಂಡಿತು. ಬಡೆಕ್ಕಿಲ ಮನೆಯಲ್ಲಿ ಕಾರ್ಯಾರಂಭಗೊಂಡ ಸಂಘ ವಿವಿಧ ಕಡೆಗಳಲ್ಲಿ ಕಾರ್ಯ ನಿರ್ವಹಿಸಿ ಸದ್ಯ ಕೆದಿಲವನ್ನು ಕೇಂದ್ರೀಕೃತವಾಗಿಸಿಕೊಂಡು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದೆ. ಸ್ಥಳೀಯ 7 ಅಂಗನವಾಡಿಗಳಿಗೆ ಗ್ಯಾಸ್ ಕಿಟ್ ವಿತರಣೆ, ಪ್ರತಿ ವರ್ಷ 4 ಶಾಲೆಗಳ ಗರಿಷ್ಠ ಅಂಕ ಗಳಿದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಬೆಳಗ್ಗೆ 10.30ಕ್ಕೆ ಆಡಳಿತ ಕಛೇರಿ ಯಶಸ್ಸು ಮೇಲಂತಸ್ತಿನಲ್ಲಿ ನಿಮಿಸಿದ ಶತಾನಂದ ಸಭಾಭವನದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಸಲಿದ್ದು, ಅಧ್ಯಕ್ಷತೆಯನ್ನು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ವಹಿಸಲಿದ್ದಾರೆ. ಕೆದಿಲ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿದ ಮಾರ್ಗ ಸೂಚನಾ ಫಲಕದ ಲೋಕಾರ್ಪಣೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನಡೆಸಲಿದ್ದು, ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನಡೆಸಲಿದ್ದಾರೆ ಎಂದರು.
ಸಾಯಂಕಾಲ 4.30ಕ್ಕೆ ಸಮಾರೋಪ ಸಮಾರಂಭ ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ. ಜಿ. ರಾಜಾರಾಮ್ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶತಮಾನೋತ್ಸ ಸವಿನೆನಪಿನ ಸ್ಮರಣ ಸಂಚಿಕೆ ಶತಮಾನದ ಮಾನ ಬಿಡುಗಡೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾಡಲಿದ್ದು, ಶತಮಾನೋತ್ಸವದ ಸವಿನೆನಪಿಗಾಗಿ ಕೆದಿಲ ಗ್ರಾಮದ ವಿದ್ಯಾಸಂಸ್ಥೆಗಳಿಗೆ ನೀಡುವ ಕೊಡುಗೆಗಳ ವಿತರಣೆಯನ್ನು ಶಾಸಕ ಸಂಜೀವ ಮಠಂದೂರು ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಅಣ್ಣಪ್ಪ ಕುಲಾಲ್ ಪೇರಮೊಗ್ರು, ಸದಸ್ಯರಾದ ಜೆ. ಕೃಷ್ಣ ಭಟ್ಟ ಮೀರಾವನ, ಪ್ರವೀಣ್ ರೈ ಕಲ್ಲಾಜೆ, ಓ. ಶ್ಯಾಮ ಪ್ರಸಾದ್ ಪುಂಜತ್ತೋಡಿ, ಕೇಶವ ನಾಯ್ಕ ಬಿ. ಬಡೆಕ್ಕಿಲ, ದರ್ಣಪ್ಪ ಗೌಡ ವಾಲ್ತಜೆ, ಜಿ. ಮಹಮ್ಮದ್ ಗಾಂಧಿನಗರ, ಅರುಣ ವಾಲ್ತಜೆ, ಬೆನ್ನಿ ಲಸ್ರಾದೋ ಕರಿಮಜಲು, ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿಟ್ಲ ವಲಯ ಮೇಲ್ವಿಚಾರಕ ಯೋಗೀಶ್ ಎಚ್., ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಕಾಂತುಕೋಡಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ಟ ಬಡೆಕ್ಕಿಲ, ಕಾರ್ಯದರ್ಶಿ ಚೆನ್ನಪ್ಪ ಗೌಡ ಕುದುಮಾನ್, ಉಪಾಧ್ಯಕ್ಷ ಮುರಳೀಧರ ಕೆ. ಶೆಟ್ಟಿ ಕಲ್ಲಾಜೆ, ಜೆ. ಭೀಮ ಭಟ್ಟ ಮೀರಾವನ, ಸ್ಮರಣ ಸಂಚಿಕೆ ಸಂಚಾಲಕ ಚಂದ್ರಶೇಖರ ಭಟ್ ಕುಕ್ಕಜೆ, ನವೋದಯ ಸ್ವ ಜಿಲ್ಲಾ ಮೇಲ್ವಿಚಾರ ರಂಜಿತ್ ಕುಮಾರ್, ತಾಲ್ಲೂಕು ಮೇಲ್ವಿಚಾರಕ ಉದಯ ಮತ್ತಿತರರು ಉಪಸ್ಥಿತರಿದ್ದರು.