Header Ads
Header Ads
Header Ads
Header Ads
Header Ads
Header Ads
Breaking News

ಶರಥಿ ಪ್ರತಿಷ್ಠಾನದಿಂದ ಅಕ್ಟೋಬರ್ 6ರಂದು ಮುದ್ದು ಶಾರದೆ ಮತ್ತು ನವದುರ್ಗೆ ವೇಷ ಸ್ಪರ್ಧೆ

ಮಂಗಳೂರಿನ ಶರಥಿ ಪ್ರತಿಷ್ಠಾನದಿಂದ ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಮುದ್ದು ಶಾರದೆ ಮತ್ತು ನವದುರ್ಗೆ ವೇಷ ಸ್ಪರ್ಧೆಯನ್ನು ಅಕ್ಟೋಬರ್ 6ರಂದು ಕುದ್ರೋಳಿಯ ಕೂಟಕ್ಕಳ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದಿನೇಶ್ ಹೊಳ್ಳ ತಿಳಿಸಿದರು.
ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದಸರಾ ಪ್ರಯುಕ್ತ ಮುದು ಶಾರದೆ ಮತ್ತು ನವದುರ್ಗೆ ವೇಷ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ. ಇದು ಪುನೀಕ್ ಶೆಟ್ಟಿ ಅವರ ಪರಿಕಲ್ಪನೆ ಎಂದು ಹೇಳಿದ ಅವರು, ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ಜರುಗಲಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ ಎಲ್ಲಾ ಸ್ಪರ್ಧಾಳುಗಳಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪುನಿಕ್ ಶೆಟ್ಟಿ, ದಿಲೀಪ್ ಸಾಲ್ಯಾನ್, ಶ್ರೇಯಸ್, ಯೋಗಗುರು ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *