Header Ads
Breaking News

ಶಾರದಾ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಮುಕ್ತ ಪುನಶ್ಚೇತನಾ ಕೇಂದ್ರ ಉದ್ಘಾಟನೆ

ಮಂಗಳೂರು : ತಲಪಾಡಿಯ ದೇವಿನಗರದಲ್ಲಿರುವ ಶಾರದಾ ಯೋಗ, ನ್ಯಾಚುರೋಥೆರಪಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್ ಮುಕ್ತ ಪುನಶ್ಚೇತನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಹೊರವಲಯದ ತಲಪಾಡಿಯಲ್ಲಿರುವ ಶಾರದಾ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಮುಕ್ತ ಪುನಶ್ಚೇತನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶಾಸಕ ಯು.ಟಿ.ಖಾದರ್ ಕೋವಿಡ್ ಮುಕ್ತರ ಪುನಶ್ಚೇತನಾ ಕೇಂದ್ರವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೋವಿಡ್ ಎನ್ನುವುದು ವಿಚಿತ್ರ ಮತ್ತು ಹೊಸ ಕಾಯಿಲೆ, ಪ್ರಸ್ತುತ ದಿನಗಳಲ್ಲಿ ಕಾಯಿಲೆ ಬರದಂತೆ ಜಾಗರೂಕತೆ ವಹಿಸುವುದು ಮುಖ್ಯ. ಕೋವಿಡ್ ಬಂದ ಬಳಿಕ ಮಾನಸಿಕ ಒತ್ತಡಕ್ಕೊಳಗಾದವರಿಗೆ ಕೇಂದ್ರ ಸಾಕಷ್ಟು ಪ್ರಯೋಜನಕಾರಿ. ಕೋವಿಡ್ ಗೆ ಔಷಧ ಕಂಡುಹಿಡಿಯಲು ಹಲವು ವರ್ಷಗಳು ಬೇಕಾಗಬಹುದು. ಆದರೂ ಕೋವಿಡ್ ಹೋಗಿದೆ ಎನ್ನುವ ಭಾವನೆ ಪ್ರಸ್ತುತ ಜನಮನದಲ್ಲಿದ್ದು ಈ ಬಗ್ಗೆ ಅಜಾಗರೂಕತೆ ಸಲ್ಲದು. ಇನ್ನೆರಡು ತಿಂಗಳು ಅತ್ಯಂತ ಕಠಿಣವಾಗಿದೆ ಎಂದು ಹೇಳಿದರು.

ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತ್ ಪ್ರಕಾಶ್, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಆಯುಶ್ ಅಧೀಕ್ಷಕಿ ಡಾ.ಸಹನಾ, ಟ್ರಸ್ಟಿಗಳಾದ ಪ್ರದೀಪ್ ಕುಮಾರ್ ಕಲ್ಕೂರ, ಡಾ.ಸೀತಾರಾಮ ಭಟ್, ಸುಧಾಕರ ಪೇಜಾವರ, ಡಾ.ಸೀತಾರಾಮ್ ಭಟ್, ಪ್ರಾಂಶುಪಾಲ ಡಾ.ರವಿಗಣೇಶ್ ಮೊಗ್ರ, ಡಾ.ರಾಜೇಶ್ ಪಾದೆ . ವಿಕ್ರಂ ಕುಂಟಾರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *