Header Ads
Header Ads
Breaking News

ಶಾಲಾ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸಿದ್ರೆ ಕಠಿಣ ಕ್ರಮ : ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಎಚ್ಚರಿಕೆ

ಶಾಲಾ ವಾಹನ ಹಾಗೂ ರಿಕ್ಷಾಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋದರೆ ಅಂತವರ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಎಚ್ಚರಿಸಿದ್ದಾರೆ. ಇಂದು ಎಸ್ಪಿ ಕಚೇರಿಯಲ್ಲಿ ಸಾರ್ವಜನಿಕರ ನೇರ ಫೋನ್ ಕಾರ್ಯಕ್ರಮದ ಸಂದರ್ಬದಲ್ಲಿ ಹೇಳಿದರು. ಪರ್ಕಳದಲ್ಲಿ ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಬಂದಿದ್ದು ಪರ್ಕಳದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿದೆ. ಈ ಬಗ್ಗೆ ಕಠಿನ ಕ್ರಮದ ಎಚ್ಚರಿಕೆ ನೀಡಿರುವ ಅವರು ಈ ಬಗ್ಗೆ ರಿಕ್ಶಾ ಯೂನಿಯನ್ ಗೂ ಸಹ ಮಾಹಿತಿ ನೀಡಲಾಗುವುದು ಎಂದರು. ಇನ್ನು ಪ್ರತೀ ಶುಕ್ರವಾರ ನಡೆಯುವ ಪರ್ಕಳ ಸಂತೆ ಮಾರ್ಕೆಟ್ ನಲ್ಲಿ ಮೊಬೈಲ್ ಕಳ್ಳತನವಾಗುತ್ತಿದ್ದು ಈ ಬಗ್ಗೆ ಫೋನ್ ಮೂಲಕ ಎಸ್ಪಿ ಅವರಿಗೆ ಸಾರ್ವಜನಿಕರು ದೂರು ನಿಡಿದರು.ಮಾತ್ರವಲ್ಲದೇ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಅಂತ ದೂರುದಾರರು ದೂರಿದರು. ಇದಕ್ಕೆ ಮಾತನಾಡಿದ ಎಸ್ಪಿ ಯಾರಾದರೂ ಮೊಬೈಲ್ ಕಳ್ಳತನವಾದರೆ ಐಎಂಎ ಗೆ ದೂರು ನೀಡಬೇಕು ಆಗ ಮೊಬೈಲ್ ಟ್ರೇಸ್ ಮಾಡಲು ಸುಲಭವಾಗುತ್ತದೆ ಎಂದರು. ಇನ್ನು ಗಂಗೊಳ್ಳಿಯಲ್ಲಿ ನಿರಂತರವಾಗಿ ನಡೆಯುಇತ್ತಿರುವ ಮಟ್ಕಾ ದಂಧೆಯ ಬಗ್ಗೆ ಮತ್ತೆ ದೂರು ಬಂದವು. ಈ ಬಗ್ಗೆ ಸ್ಥಳೀಯ ಠಾಣಾ ಪೊಲೀಸರಿಗೆ ಎಚ್ಚರಿಸಿದ ಎಸ್ಪಿ ಯಾರಾದರೂ ಮಟ್ಕಾ ದಂಧೆ, ಅಕ್ರಮ ಗಣಿಗಾರಿಕೆಯ ಬಗ್ಗೆ ದೂರು ಬಂದರೆ ದೂರು ಸ್ವೀಕರಿಸದೇ ಕ್ರಮ ಕೈಗೊಳ್ಳದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ೨೦ ಮಟ್ಕಾ ಕೇಸು ದಾಖಲಿಸಿ ೨೦ ಮಂದಿಯನ್ನು ಬಂದಿಸಲಾಗಿದೆ. ೩೩ ಜೂಜು ಕೇಸು ದಾಕಲಿಸಲಾಗಿದ್ದು ೩೩ ಮಂದಿಯನ್ನು ಎರೆಸ್ಟ್ ಮಾಡಲಾಗಿದೆ.ಕೊಟ್ಪಾ ಕಾಯಿದೆಯಡಿ ೮೬ ಕೇಸು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಇಂದು ಒಟ್ಟು ೧೬ ಫೋನ್ ಗಳಿಗೆ ಎಸ್ಪಿ ಸ್ಪಂದಿಸ್ದರು

Related posts

Leave a Reply

Your email address will not be published. Required fields are marked *