Header Ads
Breaking News

ಶಾಸಕ ಯು. ಟಿ. ಖಾದರ್ ಅವರಿಂದ ಮತ ಚಲಾವಣೆ : ಕುತ್ತಾರು ಶಾಲೆಯಲ್ಲಿ ಬೆಳಕಿಲ್ಲದೆ ಪರದಾಡಿದ ಸಿಬ್ಬಂದಿಗಳು

ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಇಂದು ಮತದಾನ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 106 ಗ್ರಾಮ ಪಂಚಾಯತ್ ಗಳ 1631 ಮತಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 3845 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸುತ್ತಿದ್ದು, ಮತದಾನ ಪ್ರಕ್ರಿಯೆ ಆರಂಭದಿಂದಲೇ ಚುರುಕು ಪಡೆದಿದೆ. ಬೆಳಿಗ್ಗೆ 9 ಗಂಟೆಯವರೆಗೆ ದ.ಕ ಜಿಲ್ಲೆಯಲ್ಲಿ ಒಟ್ಟು ಶೇ.14.48 ಮತದಾನ ನಡೆದಿದೆ. ಮಂಗಳೂರು ಶೇ. 14.6, ಮೂಡಬಿದರೆ ಶೇ. 15.64, ಬಂಟ್ಟಾಳ ತಾಲೂಕಿನಲ್ಲಿ ಶೇ. 13.75 ಮತದಾನವಾಗಿದೆ.ಶಾಸಕರು, ಮಾಜಿ ಸಚಿವರಾದಿಯಾಗಿ ಪ್ರಭಾವಿಗಳು ಬೆಳಗ್ಗೆಯೇ ಮತದಾನದಲ್ಲಿ ಪಾಲ್ಗೊಂಡರು. ಶಾಸಕ ಯು.ಟಿ. ಖಾದರ್ ಬೋಳಿಯಾರ್ ರಂತಡ್ಕದ ಜಾರದಗುಡ್ಡೆ ಶಾಲೆಯಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಪ್ರೈ.ಲಿ ನಿಗಮದ ಅಧ್ಯಕ್ಷ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅವರು, ಪಾನೇಲ ಬರಿಕೆ ಶಾಲೆಯಲ್ಲಿ ಮತ ಚಲಾಯಿಸಿದರು.

ಮಂಗಳೂರು ತಾಲೂಕಿನ ಕುತ್ತಾರು ಶಾಲೆಯಲ್ಲಿ ಬೆಳಗ್ಗೆ 4.30 ರಿಂದ ಪವರ್ ಕಟ್ ಆದ ಕಾರಣ ಚುನಾವಣಾ ಸಿಬ್ಬಂದಿ ಬೆಳಕಿಲ್ಲದೆ ಪರದಾಡಿದ ಪ್ರಸಂಗ ನಡೆಯಿತು. ಬಳಿಕ ಕ್ಯಾಂಡಲ್ ಮತ್ತು ಮೊಬೈಲ್ ಟಾರ್ಚ್ ನಲ್ಲಿ ಕರ್ತವ್ಯ ನಿರ್ವಹಿಸಬೇಕಾಯಿತು.ಉಳ್ಳಾಲ ವ್ಯಾಪ್ತಿಯ ಹಲವು ಮತಗಟ್ಟೆಗಳಲ್ಲಿ ವಿದ್ಯುತ್ ಸಂಪರ್ಕದ ಕೊರತೆ ಇರುವ ಕಾರಣ ಚುನಾವಣಾ ಸಿಬ್ಬಂದಿ ಸಮಸ್ಯೆ ಎದುರಿಸುವಂತಾಯಿತು.

Related posts

Leave a Reply

Your email address will not be published. Required fields are marked *