Header Ads
Header Ads
Header Ads
Breaking News

ಶಿಕ್ಷಕ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ರೂವಾರಿ: ಬಂಟ್ವಾಳದಲ್ಲಿ ವೃಷಭ್‌ರಾಜ್ ಜೈನ್ ಅಭಿಪ್ರಾಯ

ಪ್ರತಿಯೊಬ್ಬ ಶಿಕ್ಷಕನು ಒಬ್ಬ ವಿದ್ಯಾರ್ಥಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಶಿಕ್ಷಕರು ಎರಡನೇ ಹೆತ್ತವರು. ಶಿಕ್ಷಕ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ರುವಾರಿ, ಈ ಎಲ್ಲಾ ಪಾತ್ರಗಳನ್ನು ಶಿಕ್ಷಕ ಸರಿಯಾಗಿ ನಿಭಾಯಿಸಿದಾಗ ಆತ ಉತ್ತಮ ಶಿಕ್ಷಕನಾಗುತ್ತಾನೆ ಎಂದು ನಿವೃತ್ತ ಪ್ರಾಧ್ಯಪಕ ಪ್ರೊ. ವೃಷಭರಾಜ್ ಜೈನ್ ಹೇಳಿದರು.


ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಮಟ್ಟದ ಗುರುವಂದನಾ ಸಮಿತಿ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇವರ ಸಹಯೋಗದೊಂದಿಗೆ ಮಂಗಳವಾರ ಬಂಟ್ವಾಳ ಶ್ರೀ ಮಂಜುನಾಥೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು. ಶಿಕ್ಷಕ ರಿಂದ ಸಮಾಜ ಬಹಳಷ್ಟನ್ನು ನಿರೀಕ್ಷಿಸುತ್ತದೆ, ಮಕ್ಕಳು ಶಿಕ್ಷಕರನ್ನು ತುಂಬಾ ನಂಬುತ್ತಾರೆ, ಅವರ ನಂಬಿಕೆಗಳನ್ನು ಹುಸಿ ಮಾಡದೆ, ಶಿಕ್ಷಕರಾದವರು ತಮ್ಮ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಶಿಲ್ಪಿ ಕಲ್ಲನ್ನು ಕೆತ್ತುವಲ್ಲಿ ಮೈಗೂಡಿಸಿಕೊಂಡ ಶಿಸ್ತು, ಸಂಯಮ, ತಾಳ್ಮೆ, ನಯನಾಜೂಕು ತನವನ್ನು ಶಿಕ್ಷಕರೂ ಮೈಗೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸದಸ್ಯೆ ಬೇಬಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಜಿಲ್ಲಾಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ನಾರಾಯಣ ಹೆಗ್ಡೆ, ಡಯಟ್ ಉಪನ್ಯಾಸಕಿ ಚಂದ್ರಾವತಿ, ಕ್ಷೇತ್ರ ಸಮನ್ವಯಾಧಿಕಾರಿ ರಾಜೇಶ್, ಶಿಕ್ಷಣ ಸಂಘಟನೆಗಳ ಪ್ರಮುಖರಾದ ರಮೇಶ್ ನಾಯಕ್ ರಾಯಿ, ಶಿವಪ್ರಸಾದ್ ಶೆಟ್ಟಿ, ಜೋಯಲ್ ಲೋಬೋ, ಉಮಾನಾಥ ರೈ, ವೈ ರಘು, ಚನ್ನಕೇಶವ, ಲ್ಯಾನ್ಸಿ ಡಿ’ಸೋಜ, ಜಗದೀಶ್ ಬಾಳ್ತಿಲ, ನವೀನ್, ಜಯರಾಮ್ ಉಪಸ್ಥಿತರಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply