Header Ads
Header Ads
Breaking News

ಶಿರಾಡಿಘಾಟ್ ಹೆದ್ದಾರಿಯಲ್ಲಿ ಪ್ರಯಾಣಕ್ಕೆ ಅನುಮತಿ: ಡಿಸಿ ಸಸಿಕಾಂತ್ ಸೆಂಥಿಲ್

ಪ್ರಾಕೃತಿಕ ವಿಕೋಪದಿಂದಾಗಿ ಸಂಪೂರ್ಣ ಹದಗೆಟ್ಟಿದ್ದ ಶಿರಾಡಿ ಘಾಟ್ ಹೆದ್ದಾರಿ ಇದೀಗ ಸಮರ್ಪಕವಾಗಿದ್ದು, ಬುಧವಾರದಿಂದ ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಕರ ವಾಹನಕ್ಕೆ ಅನುಮತಿ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಎಲ್ಲಾ ರೀತಿಯ ಬಸ್‌ಗಳಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಯಾವುದೇ ಗೂಡ್ಸ್ ವಾಹನ ಪ್ರಯಾಣಕ್ಕೆ ಅನುಮತಿಯಿಲ್ಲ. ಒಂದು ವಾರದ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Related posts

Leave a Reply