Header Ads
Header Ads
Breaking News

ಶಿಸ್ತಿನಿಂದ ಯಶಸ್ವಿ ಜೀವನ ಸಾಧ್ಯ: ಮಂಜುನಾಥ ಶೆಟ್ಟಿ

ಮಂಗಳೂರು: ಶಿಸ್ತು ಇದ್ದಾಗ ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯ. ಕಠಿಣ ಪರಿಶ್ರಮ ಪಟ್ಟಾಗ ಸ್ಪರ್ಧೆ ಎದುರಿಸುವ ಶಕ್ತಿ ಬರುತ್ತದೆ ಎಂದು ಮಂಗಳೂರು ಸಂಚಾರಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ ಹೇಳಿದರು.

ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೆಟ್ಟ ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಬೆಳೆಸಿಕೊಂಡು ವಿದ್ಯಾಭ್ಯಾಸದೆಡೆಗೂ ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ್ ಎಂ.ಎ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಕ್ರೀಡಾಸ್ಫೂರ್ತಿ ಸದಾ ಹೀಗೆ ಇರಲಿ, ಕ್ರೀಡಾಕೂಟ ಯಶಸ್ವಿಗೊಳ್ಳಲಿ ಎಂದು ಶುಭ ಹಾರೈಸಿದರು. ಬಳಿಕ ಕ್ರೀಡಾಜ್ಯೋತಿ ಕಾರ್ಯಕ್ರಮ ನೆರವೇರಿತು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಣ್ಣ ನಾಯ್ಕ್, ಮತ್ತು ಕ್ರೀಡಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಕ್ರೀಡಾ ನಿರ್ದೇಶಕ ಡಾ. ದಯಾಕರ್ ಸ್ವಾಗತಿಸಿದರು. ಕ್ರೀಡಾ ಸಹ ನಿರ್ದೇಶಕಿ ಸುರೇಖಾ ವಂದಿಸಿದರು. ವಿದ್ಯಾರ್ಥಿನಿ ವಾಣಿ ನಿರೂಪಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ಜರುಗಿದವು.

Related posts

Leave a Reply