Header Ads
Breaking News

ಶೀರೂರು ಶ್ರೀಗಳ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹ

ಶೀರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಸೂಕ್ತ ತನಿಖೆ ಆಗ್ರಹಿಸಿ ಅಭಿಮಾನಿಗಳ ಸಭೆ ನಡೆಯಿತು. ಉಡುಪಿಯ ಕೃಷ್ಣಮಠದ ಸಮೀಪದ ಬೈಲಕೆರೆ ಮಥುರಾ ಛತ್ರದಲ್ಲಿ ಶೀರೂರು ಅಭಿಮಾನಿ ಸಮಿತಿ ಸಭೆ ನಡೆಸಿತು.

ಸ್ವಾಮೀಜಿ ಸಾವಿನ ಸೂಕ್ತ ಸೂಕ್ತ ತನಿಖೆ ನಡೆಯಬೇಕಾದ್ರೆ ದೂರು ದಾಖಲಾಗಬೇಕು, ಎಫ್.ಐ.ಆರ್ ದಾಖಲಾಗದೆ ಇರುವುದೇ ತನಿಖೆಗೆ ಅಡ್ಡಿಯಾಗುತ್ತಿದೆ, ಹೀಗಾಗಿ ಎಫ್.ಐ.ಆರ್ ದಾಖಲಾಗದೆ ತನಿಖೆ ಸಾಧ್ಯವಿಲ್ಲ ಎಂದು ಕಾನೂನು ಸಲಹೆಗಾರ ವಕೀಲ ರವಿಕಿರಣ್ ಮುರುಡೇಶ್ವರ ಅಭಿಮಾನಿ ಸಮಿತಿಗೆ ಸಲಹೆ ನೀಡಿದ್ರು. ಈಗಾಗಲೇ ನೀಡಿರುವ ದೂರಿನ ಆಧಾರದಲ್ಲಿ ತನಿಖೆ ಸಾಧ್ಯವಿಲ್ಲ,ಯಾಕಂದ್ರೆ ಅದು ಅಸಹಜ ಸಾವು ಎಂದಷ್ಟೇ ದೂರು ದಾಖಲಾಗಿದೆ, ದೂರಿನಲ್ಲಿ ಸ್ಪಷ್ಟತೆ ಇರದೆ ಹೋರಾಟ ಮಾಡಿ ಪ್ರಯೋಜನವಿಲ್ಲ ಹಾಗಾಗಿ ಸೂಕ್ತ ರೀತಿಯಲ್ಲಿ ದೂರು ನೀಡಬೇಕು ಎಂಬ ಸಲಹೆಯನ್ನು ಸಮಿತಿಗೆ ನೀಡಿದ್ರು.
ಸೂಕ್ತ ದೂರು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ಅಭಿಮಾನಿ ಸಮಿತಿ ನಿರ್ಧರಿಸಿತು. ಇದರ ಜೊತೆ ಆಗಸ್ಟ್ 18ರಂದು ಶೃದ್ದಾಂಜಲಿ ಸಭೆ ಹಾಗೂ ಸ್ವಾಮಿಗಳ ನೆನಪಿನಲ್ಲಿ ಅಷ್ಟಮಿಗೆ ವಿಶೇಷ ಕಾರ್ಯಕ್ರಮ ಏರ್ಪಡಿಸುವ ಬಗೆಗೂ ಅಭಿಮಾನಿ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿತು. ಸಭೆಯಲ್ಲಿ ಕೇಮಾರು ಈಶ ವಿಠಲ ದಾಸ ಸ್ವಾಮೀಜಿ, ಸೇರಿದಂತೆ ಅನೇಕರು ಭಾಗವಹಿಸಿದ್ರು. ಮುಂದಿನ ಹೋರಾಟದ ರೂಪುರೇಷೆಗಳ ಚಿಂತನೆ ನಡೆಯಿತು.

Related posts

Leave a Reply