Header Ads
Header Ads
Breaking News

ಶೇಂದಿಯನ್ನು ನೀರಾ ಆಗಿ ಪರಿವರ್ತಿಸಿ ಆದಾಯ ಹೆಚ್ಚಿಸಲು ಯೋಜನೆ : ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರತ್ಯೇಕ ನೀರಾ ಘಟಕ ಆರಂಭಿಸಲು ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ. ಅದಕ್ಕಾಗಿ ತಲಾ ಒಂದು ಕೋಟಿ ಬಿಡುಗಡೆ ಮಾಡಿ, ಶೇಂದಿಯನ್ನು ನೀರಾ ಆಗಿ ಪರಿವರ್ತಿಸಿ ಆದಾಯ ಹೆಚ್ಚಿಸಲು ಸಾಧ್ಯವಿದ್ದಲ್ಲಿ ಅದಕ್ಕೆ ಬೇಕಾದ ಯೋಜನೆ ರೂಪಿಸಲಾಗುವುದು ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಹಾಗೂ ಉಭಯ ಜಿಲ್ಲಾ ಸಮಸ್ತ ಮೂರ್ತೆದಾರರ ಸಹಕಾರಿ ಸಂಘಗಳು ಪಡುಬಿದ್ರಿ ಸಾಯಿ ಆರ್ಕೇಡ್‍ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೆಳ್ಳಿಯ ಕುಡುಗತ್ತಿ ನೀಡಿ ಸಚಿವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಅಧ್ಯಕ್ಷ ಕೊರಗ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಪಿ.ಕೆ. ಸದಾನಂದ, ಮೂರ್ತೆದಾರರ ಚಳುವಳಿಯ ನೇತಾರ ನಾರಾಯಣ ಪೂಜಾರಿ ಮೂಡುಪೆರಾರ, ದಕ್ಷಿಣಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಉಪಾಧ್ಯಕ್ಷ ಶಿವಪ್ಪ ಸುವರ್ಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *