Header Ads
Header Ads
Breaking News

ಶ್ರೀಕಾಶೀಮಠ ಸಂಸ್ಥಾನದ ಸ್ವಾಮೀಜಿ ವಿರುದ್ಧ ಸ್ಯಾಮ್ ಪೀಟರ್‌ಗೆ ಸುಪಾರಿ : ತನಿಖೆಗೆ ಆಗ್ರಹಿಸಿ ಮನವಿ

ಶ್ರೀಕಾಶೀ ಮಠ ಸಂಸ್ಥಾನದ ಸ್ವಾಮೀಜಿ ವಿರುದ್ಧ ರಾಘವೇಂದ್ರ ತೀರ್ಥ ಯಾನೇ ಶಿವಾನಂದ ಪೈ ಹಾಗೂ ಉಡುಪಿಯ ರಾಮಚಂದ್ರ ನಾಯಕ್ ಎಂಬುವರು ಸ್ಯಾಮ್ ಪೀಟರ್‌ಗೆ ಸುಪಾರಿ ನೀಡಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಎಫ್ ಐಆರ್ ದಾಖಲಿಸಬೇಕೆಂದು ಗೌಡ ಸಾರಸ್ವರ ಬ್ರಾಹ್ಮಣ ದೇವಳಗಳ ಅಸೋಸಿಯೇಷನ್ ಪದಾಧಿಕಾರಿಗಳು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ನಗರದ ರಥಬೀದಿ ವೆಂಕಟರಮಣ ದೇವಳದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಪದಾಧಿಕಾರಿ, ಲೆಕ್ಕಪರಿಶೋಧಕ ಸುರೇಂದ್ರ ನಾಯಕ್, ಈ ಪ್ರಕರಣದಿಂದ ಸಮುದಾಯದ ಜನರಿಗೆ, ಕಾಶೀ ಮಠದ ಭಕ್ತರಿಗೆ, ಸ್ವಾಮೀಜಿಯವರ ಶಿಷ್ಯರಿಗೆ ದಿಗ್ಭ್ರಮೆ ಆಗಿದೆ. ಶಿವಾನಂದ ಪೈ ಅವರನ್ನು ಎಲ್ಲ ಕೋರ್ಟ್‌ಗಳು ಈಗಾಗಲೇ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ವಾಮಮಾರ್ಗದ ಮೂಲಕ ಮತ್ತೆ ಕಾಶೀ ಮಠದ ಪೀಠಾಧಿಪತಿಯಾಗಲು ಹೊರಟಿದ್ದಾರೆ ಎಂದು ಆರೋಪಿಸಿದ್ರು. ಬಿಎಸ್ ಬಿ ಸಮುದಾಯಕ್ಕೆ ಗುರುಪೀಠ ಆತೀ ಮುಖ್ಯ. ದೇವರನ್ನ ಪೂಜಿಸುವಂತೆ ಗುರುಗಳನ್ನು ನಡೆದಾಡುವ ದೇವರು ಎಂದು ಪೂಜಿಸುತ್ತೇವೆ. ರಾಘವೇಂದ್ರ ತೀರ್ಥ ಯಾನೇ ಶಿವಾನಂದ ಪೈ ಮಠದ ಕಿರಿಯ ಸ್ವಾಮೀಜಿಯಾಗಿದ್ದ ವೇಳೆ ಗುರುವಿನ ಮೇಲೆಯೇ ಸವಾರಿ ಮಾಡಿ ನಾನೇ ಮಠಾಧಿಪತಿ ಎಂದು ಹೇಳಿಕೊಂಡಿದ್ದರು. ಮಠದಿಂದ ಪರಿತ್ಯಕ್ತಗೊಂಡ ಬಳಿಕ ಅವರ ಬಳಿ ಇದ್ದ ಸಂಸ್ಥಾನಕ್ಕೆ ಸಂಬಂಧಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಹಿಂತಿರುಗಿಸಲು ನ್ಯಾಯಾಲಯ ಆದೇಶ ನೀಡಿದ್ದರೂ ಇನ್ನೂ ಹಿಂತಿರುಗಿಸದೆ ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ರು. ಈ ವೇಳೆ ಅಸೋಸಿಯೇಷನ್ ಅಧ್ಯಕ್ಷ ಎಂ.ಜಗನ್ನಾಥ್ ಕಾಮತ್, ಉಪಾಧ್ಯಕ್ಷ ದಿನೇಶ್ ಕಾಮತ್, ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಶಾಸಕ ಯೋಗೀಶ್ ಭಟ್, ಕಾರ್ಯದರ್ಶಿ ಗೋಪಿನಾಥ್ ಪೈ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *