Header Ads
Header Ads
Breaking News

ಶ್ರೀಕೃಷ್ಣಾಜನ್ಮಾಷ್ಠಮಿ ಪ್ರಯುಕ್ತ ಹುಲಿವೇಷ ಸ್ಪರ್ಧೆ

ಶ್ರೀ ಕೃಷ್ಣಾಜನ್ಮಾಷ್ಠಮಿಯ ಸಂದರ್ಭದಲ್ಲಿ ಆಶೋಕ್ ರಾಜ್ ಮತ್ತು ಬಳಗದಿಂದ ಹುಲಿವೇಷ ಹಾಕಿಕೊಂಡು ಕೃಷ್ಣಜನ್ಮಾಷ್ಠಮಿಗೆ ಮೆರುಗು ತರುತ್ತಿದ್ದು ಈಗ 25 ವರ್ಷ ಸಂದ ಹಿನ್ನಲೆಯಲ್ಲಿ ಈ ಬಾರಿ ಹುಲಿವೇಷ ಸ್ಪರ್ಧೆಯನ್ನ ಆಯೋಜಿಸಿದೆ.ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಹುಲಿವೇಷ ತಂಡದ ಅಧ್ಯಕ್ಷ ಅಶೋಕ್ ರಾಜ್ ಕಾಡಬೆಟ್ಟು ಮಾಹಿತಿ ನೀಡಿದರು. ಬ್ರಹ್ಮಗಿರಿಯ ಜಂಕ್ಷನ್‍ನಲ್ಲಿ ಈ ಸ್ಪರ್ಧೆ ಆಗಸ್ಟ್ 24ರಂದು ನಡೆಯಲಿದ್ದು ಸಂಜೆ 5ರಿಂದ ರಾತ್ರಿ 10ರ ವರೆಗೆ ಈ ಕಾರ್ಯುಕ್ರಮ ನಡೆಯಲಿದೆ. ಒಟ್ಟು 12 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು ಈ ಹಿಂದೆ ನಮ್ಮ ಹುಲಿವೇಷ ತಂಡ ವಿವಿಧ ಭಾಗಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಈ ಬಾರಿ ನಮ್ಮ ತಂಡದಿಂದಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರಥಮ ಸ್ಥಾನ ಪಡೆದ ತಂಡಕ್ಕೆ 30 ಸಾವಿರ, ಎರಡನೇ ತಂಡಕ್ಕೆ 20 ಹಾಗೂ ತೃತೀಯ 10 ಸಾವಿರ ನಗದು, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದರು.

Related posts

Leave a Reply

Your email address will not be published. Required fields are marked *