Header Ads
Breaking News

ಶ್ರೀನಿವಾಸ್‌ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟೇಷನ್‌ ಫಿಸಿಕ್ಸ್‌ ಇನ್‌ ಎಮರ್ಜಿಂಗ್‌ ಟೆಕ್ನಾಲಜಿಸ್‌ ಅಂತರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು : ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕಾಲೇಜ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌ ಆಂಡ್‌ ಇನ್ಫಾರ್ಮೇಶನ್‌ ಸೈನ್ಸ್‌ವು ಆಗಸ್ಟ್‌ 1 ಶನಿವಾರದಂದು ಕಂಪ್ಯೂಟೇಷನ್‌ ಫಿಸಿಕ್ಸ್‌ ಇನ್‌ ಎಮರ್ಜಿಂಗ್‌ ಟೆಕ್ನಾಲಜಿಸ್‌ ಎನ್ನುವ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಝೂಮ್‌ ಆಪ್‌ನಲ್ಲಿ ಹಾಗೂ ಅದರ ನೇರಪ್ರಸಾರವನ್ನು ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ನಲ್ಲಿ ಆಯೋಜಿಸುತ್ತಿದ್ದಾರೆ.

ಈ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಭಾಷಣಗಾರರಾದ ಘಾನದ ಅಕ್ರಾ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾನ ಯಾವ್‌ ಅಸಬೇರ್‌, ರೊಮ್ಯಾನಿಯಾದ ಯೂನಿವರ್ಸಿಟಿ ಆಫ್‌ ಕ್ರೊವಾದ ಡಾ. ಆಡ್ರೀನಾ ಬುರ್ಲೆ, ಇಸ್ರೆಲ್‌ನ ಬಾರ್ಲಾನ್‌ ವಿಶ್ವವಿದ್ಯಾಲಯದ ಡಾ. ಅರೂಪ್‌ ಚಕ್ರಬೂರ್ತಿ, ನವದೆಹಲಿಯ ಕೃಷಿ ಹಾಗೂ ರೈತರ ಕಲ್ಯಾಣಭಿವೃದ್ಧಿ ಸಚಿವಾಲಯ ಐಸಿಎಆರ್-ಡಿಎಆರ್‌ಇ ಪೀಯೂಷ್‌ ಮಿಷ್ರ, ಚೆನ್ನೈನ ಹೆಚ್‌ಸಿಎಲ್‌ ಟೆಕ್ನಾಲಜಿಸ್‌ನ ಟಿ ಸೆಂತಿಲ್‌ ಕುಮಾರ್‌, ನೋಯ್ಡಾದ ಶಾರ್ದ ವಿಶ್ವವಿದ್ಯಾಲಯದ ಡಾ. ಸುದೇಶ್ನಾ ಚಾಕ್ರೋಬಾರ್ಡಿರವರು ಈ ಸಂಕಿರಣದ ವಿಷಯಗಳನ್ನುದ್ದೇಶಿಸಿ ಮಾತುಗಳನ್ನಾಡಲಿದ್ದಾರೆ ಎಂದು ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್‌ ತಿಳಿಸಿದರು.ವಿಚಾರ ಸಂಕಿರಣವನ್ನು ಝೂಮ್‌ ಆಪ್‌ನಲ್ಲಿ ಆಯೋಜಿಸಲಿದ್ದು, ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಸಿಸಿಐಎಸ್‌ನ ಡೀನ್‌ ಪ್ರೊ. ಶ್ರೀಧರ ಆಚಾರ್ಯ ತಿಳಿಸಿದರು.

100 ಕ್ಕೂ ಅಧಿಕ ಸಂಶೋಧನಾ ಪ್ರಬಂದಗಳನ್ನು ದೇಶ ವಿದೇಶದ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರಿಂದ ಸ್ವೀಕರಿಸಲಾಗಿದೆ ಜೊತೆಗೆ ಈ ಸಂಕಿರಣದಲ್ಲಿ ಭಾಗವಹಿಸುವ ಆಸಕ್ತರು ನೋಂದಣಿ ಲಿಂಕ್‌, ಐಡಿ ಪಾಸ್‌ವರ್ಡ್‌ ಪಡೆಯಲು 9482199882 ಗೆ ಸಂಪರ್ಕಿಸಬಹುದು ಎಂದು ವಿಚಾರ ಸಂಕಿರಣದ ಸಂಯೋಜಕರಾದ ಡಾ, ಎ, ಜಯಂತಿ ದೇವಿ, ಡಾ. ಕೃಷ್ಣ ಪ್ರಸಾದ್‌ ಕೆ ತಿಳಿಸಿದರು.

Related posts

Leave a Reply

Your email address will not be published. Required fields are marked *