Header Ads
Breaking News

ಶ್ರೀನಿವಾಸ್ ಪ್ರೀಮಿಯರ್ ಲೀಗ್

 ಶ್ರೀನಿವಾಸ ವಿಶ್ವವಿದ್ಯಾಲಯದಕಾಲೇಜ್‍ಆಫ್ ಮ್ಯಾನೇಜ್‍ಮೆಂಟ್‍ಆ್ಯಂಡ್‍ಕಾಮರ್ಸ್‍ನ ಎಂ.ಬಿ.ಎ. ಹಾಗೂ ಎಂ. ಕಾಂ. ವಿಭಾಗದ ವತಿಯಿಂದ ಫೂಟ್‍ಬಾಲ್‍ಟೂರ್ನಮೆಂಟ್ ಶ್ರೀನಿವಾಸ್ ಪ್ರೀಮಿಯರ್ ಲೀಗ್ ನಗರದಕೊಡಿಯಾಲ್‍ಬೈಲ್‍ನಲ್ಲಿರುವ ಸಿಟಿ ಅರೆನಾದಲ್ಲಿ ನಡೆಯಿತು. 

ಪಂದ್ಯಾವಳಿಯನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿಡಾ. ಪಿ.ಎಸ್. ಐತಾಳ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದಅವರುಆರೋಗ್ಯಕರಜೀವನಕ್ಕೆಕಲಿಕೆಯಜೊತೆಗೆಕ್ರೀಡೆಯೂಕೂಡ ಮುಖ್ಯ. ನಿರ್ವಹಣೆಯ ವಿಷಯದಲ್ಲಿಕಲಿಯುವ ಅಂಶಗಳನ್ನು ಕ್ರಿಡೆಯಲ್ಲಿಯೂ ಬಳಸಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಾಧ್ಯ. ಇಂತಹ ಪಠ್ಯೇತರ ಚಟುವಟಿಕೆಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ಸದಾ ಪ್ರೋತ್ಸಾಹವನ್ನು ನೀಡುತ್ತದೆಎಂದರು.

ಈ ವೇಳೆ ಅಭಿವೃದ್ಧಿ ಕುಲಸಚಿವ . ಡಾ. ಅಜಯ್‍ಕುಮಾರ್, ಸಿ.ಎಂ.ಸಿ.ಯಡೀನ್‍ಡಾ. ಶೈಲಶ್ರೀ ವಿ.ಟಿ., ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಪ್ರಕಾಶ್‍ಕಾಂಚನ್, ಎಂ.ಬಿ.ಎ. ಹಾಗೂ ಎಂ.ಕಾಂ. ವಿಭಾಗದಅಧ್ಯಾಪಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *