Header Ads
Breaking News

ಶ್ರೀನಿವಾಸ್ ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವ

ಶ್ರೀನಿವಾಸ್ ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್‍ನಲ್ಲಿ ನಡೆಯಿತು. ಘಟಿಕೋತ್ಸವದಲ್ಲಿ 232 ಪದವಿ ಹಾಗೂ 87 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಒಟ್ಟು 38 ರ್ಯಾಂಕ್‍ಗಳೊಂದಿಗೆ 11 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.

ಘಟಿಕೋತ್ಸವದಲ್ಲಿ ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮಿಜಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಶಿಕ್ಷಣವನ್ನು ಸಮರ್ಪಕವಾಗಿ ಪೂರೈಸವಲ್ಲಿ ವಿಶ್ವವಿದ್ಯಾಲಯಗಳು ಬಹಳಷ್ಟು ಪಾತ್ರವನ್ನು ವಹಿಸುತ್ತವೆ. ವಿಶ್ವವಿದ್ಯಾಲಯಗಳ ಪರಿಕಲ್ಪನೆಯು ಅಂದಿನ ಕಾಲದ ನಳಂದಾ, ತಕ್ಷಶಿಲೆಗಳಿಂದ ಇಂದಿನವರೆಗೂ ಬೆಳೆದು ಬಂದಿದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ವಿಶ್ವವಿದ್ಯಾಲಯಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.ಚಿಕ್ಕ ಹಂತದಿಂದ ಪ್ರಾರಂಭವಾದ ಶ್ರೀನಿವಾಸ ಶಿಕ್ಷಣ ಸಂಸ್ಥೆಯು ಇಂದು ಶ್ರೀನಿವಾಸ್ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ. ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕಲಿಯುವ ಅವಕಾಶಗಳಿವೆ. ದೇವರ ಅನುಗ್ರಹ ಮತ್ತು ಪ್ರಾಮಾಣಿಕವಾದ ಪ್ರಯತ್ನ ಎರಡೂ ಜೊತೆಗಿದ್ದರೆ, ವಿದ್ಯಾರ್ಥಿಗಳು ಜಯವನ್ನು ಸಾಧಿಸಲು ಸಾಧ್ಯ ಎಂದರು.

ಕರ್ನಾಟಕ ಸರಕಾರ ದಉಪಮುಖ್ಯಮಂತ್ರಿ ಹಾಗೂ ಉನ್ನತಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ ನಾರಾಯಣ್ – ವರ್ಚುವಲ್ ವೇದಿಕೆಯ ಮೂಲಕ ಘಟಿಕೋತ್ಸವವನ್ನುದ್ದೇಶಿ ಮಾತನಾಡಿ, ಶ್ರೀನಿವಾಸ್‍ವಿಶ್ವವಿದ್ಯಾಲಯವು ಉದ್ಯಮಶೀಲ ತರಗತಿವಾರು ಪಠ್ಯಕ್ರಮಗಳನ್ನು ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಏಳಿಗೆ ಹಾಗೂ ಅವರ ಭವಿಷ್ಯಕ್ಕೆ ಉತ್ತಮರೀತಿಯಲ್ಲಿ ಸಹಕರಿಸುತ್ತಿದೆ ಎಂದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಶ್ರೀಸಿಎ. ಎ. ರಾಘವೇಂದ್ರರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ 25 ವರ್ಷಗಳಿಂದ ಸ್ವಾಮಿಜಿಗಳನ್ನು ನೋಡುತ್ತಿದ್ದೇನೆ. ಅವರು ಯಾವುದೇ ಕೆಲಸಗಳನ್ನು ಮಾಡುವಾಗ ಶ್ರದ್ಧಾ- ಭಕ್ತಿಯಿಂದ ಮಾಡುತ್ತಿರುತ್ತಾರೆ. ಉಡುಪಿರಥಬೀದಿಯಲ್ಲಿ, ರಾಜಾಂಗಣದಲ್ಲಿ ನಗುಮುಖದಿಂದ ಜನರಿಗೆ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ ಎಂದರು.

ಘಟಿಕೋತ್ಸವದಲ್ಲಿ232 ಪದವಿ ಹಾಗೂ 87 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, 1 ಸಂಶೋಧನಾ ವಿದ್ಯಾರ್ಥಿಗೆ ಪಿ. ಹೆಚ್.ಡಿ ಪದವಿ, 1 ಡಿ.ಲಿಟ್ ಪದವಿಯಂತೆ, ಒಟ್ಟು 38 ರ್ಯಾಂಕ್‍ಗಳೊಂದಿಗೆ 11ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

ಈ ಸಂದರ್ಬ ಕುಲಾಧಿಪತಿಸಿಎ. ಎ. ರಾಘವೇಂದ್ರರಾವ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್ ರಾವ್ ಸ್ವಾಗತಿಸಿದರು.

ಘಟಿಕೋತ್ಸವದಲ್ಲಿ ಕುಲಪತಿಡಾ. ಪಿ. ಎಸ್. ಐತಾಳ್ ಶ್ರೀನಿವಾಸ್ ವಿಶ್ವವಿದ್ಯಾಲಯದ ವರದಿ ವಾಚಿಸಿದರು. ಕುಲಸಚಿವ (ಅಭಿವೃದ್ಧಿ) ಡಾ. ಅಜಯ್‍ಕುಮಾರ್ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಹಾಗೂ ಉನ್ನತಶಿಕ್ಷಣ ಸಚಿವ ಡಾಸಿ.ಎನ್. ಅಶ್ವತ್ ನಾರಾಯಣ್ರವರ ಪರಿಚಯ ನೀಡಿದರು. ಕುಲಸಚಿವಡಾ. ಅನಿಲ್ ಕುಮಾರ್ ವಂದಸಿರು. ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ವಿಜಯಲಕ್ಷ್ಮಿಆರ್. ರಾವ್, ಪ್ರೊ. ಎ. ಮಿತ್ರಾಎಸ್. ರಾವ್, ಕುಲಸಚಿವ ಆದಿತ್ಯಕುಮಾರ್ (ಶೈಕ್ಷಣಿಕ ಮತ್ತುಅಭಿವೃದ್ಧಿ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸ್ ವಿಶ್ವವಿದ್ಯಾಲಯ, ಕಾಲೇಜ್‍ಆಫ್‍ಇಂಜಿನಿಯರಿಂಗ್‍ಆಂಡ್‍ಟೆಕ್ನಾಲಜಿಯರೋಹನ್ ಫೆನಾರ್ಂಡಿಸ್‍ಕಾರ್ಯಕ್ರಮ ನಿರೂಪಿಸಿದರು

Related posts

Leave a Reply

Your email address will not be published. Required fields are marked *