

ಮಂಗಳೂರು, ಡಿಸೆಂಬರ್ 24: ಶ್ರೀನಿವಾಸ್ ವಿಶ್ವವಿದ್ಯಾಲಯದ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತುಟೂರಿಸಂನ ವಿಭಾಗದಿಂದ ಭಾರತದಲ್ಲಿಗ್ರಾಮಿಣ ಮತ್ತು ನಗರ ಪ್ರವಾಸೋದ್ಯಮ: ಪ್ರಸ್ತುತ ಪ್ರವೃತ್ತಿಗಳು ಮತ್ತು ಸಮಸ್ಯೆಗಳು ಎಂಬ ವಿಷಯದಲ್ಲಿಒಂದುದಿನದರಾಷ್ಟ್ರೀಯವರ್ಚುವಲ್ವಿಚಾರ ಸಂಕಿರಣವನ್ನು ಪಾಂಡೇಶ್ವರದಲ್ಲರುವ ಸಿಟಿ ಕ್ಯಾಂಪಸ್ನಲ್ಲಿಡಿಸೆಂಬರ್ 24ರಂದು ಆಯೋಜಿಸಿತು.
ಮ್ಯಾರಿಯೇಟ್ ಸಿಂಗಾಪುರದ ಯೋಜನೆ ಮತ್ತು ಸೇವಾ ವ್ಯವಸ್ಥಾಪಕ ಸೂರಜ್ಕನ್ನಾಕಾರ್ಯಕ್ರಮದ ಉದ್ಘಾಟಿಸಿ, ಕೋವಿಡ್ 19ರ ಪ್ರಭಾವದಿಂದ ಪ್ರವಾಸೋದ್ಯಮ ಮತ್ತುಆತಿಥ್ಯಕ್ಷೇತ್ರದಲ್ಲಾದ ಭಾರಿ ಬದಲಾವಣೆಗಳ ಕುರಿತು ಮಾತನಾಡಿದರು.ತಮಿಳುನಾಡಿನ ಮಧುರೈಕಾಮ್ರಾಜ್ ವಿಶ್ವವಿದ್ಯಾಯಲಯದ ಪ್ರಾಂಶುಪಾಲ ಡಾ. ಬಿ. ಜಾರ್ಜ್ ಹಾಗೂ ಮಣಿಪಾಲ ಮಾಹೆಯ ಪ್ರವಾಸೋದ್ಯಮ ಮತ್ತುಆತಿಥ್ಯ ವಿಭಾಗದ ಪ್ರೊ ಫೆಸರ್ಡಾ. ಸೆಂತಿಲ್ಕುಮಾರನ್ ಪಿ. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು
.ಶ್ರೀನಿವಾಸ್ ವಿಶ್ವವಿದ್ಯಾಲಯದಕುಲಾಧಿಪತಿ ಸಿಎ ಎ ರಾಘವೇಂದ್ರರಾವ್ ಹಾಗೂ ಸಹ ಕುಲಾಧಿಪರಿಡಾ. ಎ ಶ್ರೀನಿವಾಸ್ರಾವ್ ಸಮ್ಮೇಳನದಲ್ಲಿ ಮಂಡಿತವಾಗಲಿರುವ ಸಂಶೋಧನಾ ಬರಹಗಳ ಪುಸ್ತಿಕೆಯನ್ನು ಬಿಡುಗಡೆಗೊಳಿಸಿದರು. ವಿಚಾರ ಸಂಕಿರಣದ ಸಂಶೋಧನಾ ಬರಹಗಳ ಪುಸ್ತಿಕೆಯನ್ನು ಕುಲಪತಿಡಾ. ಪಿ. ಎಸ್. ಐತಾಳ್ ಬಿಡುಗಡೆಗೊಳಿಸಿದರು. ಕಾಲೇಜಿನಡೀನ್ ಪ್ರೊ . ಎಸ್. ಸ್ವಾಮಿನಾಥನ್ ಸ್ವಾಗತಿಸಿ, ಕಾರ್ಯಕಾರಿ ಕಾರ್ಯದರ್ಶಿ ಅರ್ಜುನ್ ಕೆ ವಂದಿಸಿದರು. ವಿಚಾರ ಸಂಕಿರಣದ ಸಂಯೋಜಕ ಸುಬ್ರತ್ ಸರಫ್ ಉಪಸ್ಥಿತರಿದ್ದರು.