Header Ads
Breaking News

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಯುಗಾದಿ ಮಹೋತ್ಸವ ಆರಂಭ

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವಿಕಾರಿ ನಾಮ ಸಂವತ್ಸರದ ಯುಗಾದಿ ಮಹೋತ್ಸವ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮಿಕಾಂತ ಶರ್ಮ ಇವರ ಪ್ರಧಾನ ಆಚಾರ್ಯತ್ವದಲ್ಲಿ ಎ.6ರಂದು ಧ್ವಜಾರೋಹಣ ಗೊಂಡು ಪ್ರಾರಂಭಗೊಂಡಿತು ಶ್ರೀ ಕ್ಷೇತ್ರದ ಯುಗಾದಿ ಮಹೋತ್ಸವ ಎ.6 ರಿಂದ 15ರವರೆಗೆ ಜರಗಲಿದೆ. ಧ್ವಜಾರೋಹಣಗೊಂಡ ನಂತರ ಮಹಾಪೂಜೆ, ಪಂಚಾಂಗ ಶ್ರವಣ, ಸ್ವಾಮೀಜಿಯವರಿಂದ ಆಶೀರ್ವಚನ ಪ್ರಸಾದ ವಿತರಣೆ ಜರಗಿತು. ರಾತ್ರಿ ಉತ್ಸವ ಆರಂಭಗೊಂಡಿತು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರ ಆದ ಶ್ರೀ ಕೇಶವ ಆಚಾರ್ಯ ಎರಡನೇ ಮೊಕ್ತೇಸರರ ಸುಂದರ ಆಚಾರ್ಯ ಬೆಳುವಾಯಿ ಮೂರನೇ ಮೊಕ್ತೇಸರರ ಎ. ಲೋಕೇಶ್ ಆಚಾರ್ಯ ಬಿಜೈ ಮತ್ತು ಆಡಳಿತ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಕಾಳಿಕಾಂಬ ಸೇವಾ ಸಮಿತಿಯ ಸದಸ್ಯರು, ಮತ್ತು ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಸದಸ್ಯರು ಹಾಗೂ ಅನೇಕ ಸಂಖ್ಯೆಯಲ್ಲಿ  ಭಕ್ತಾದಿಗಳು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *