Header Ads
Header Ads
Breaking News

ಬಂಟ್ವಾಳದಲ್ಲಿ ಶ್ರೀ ಪತಂಜಲಿ, ಎಸ್‌ವಿಎಸ್ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ

ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಹಾಗೂ ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬಂಟ್ವಾಳದ ನೇತ್ರಾವತಿ ನದಿ ಕಿನಾರೆಯಲ್ಲಿರುವ ಶ್ರೀ ತಿರುಮಲ ವೆಂಕಟರಣ ದೇವಸ್ಥಾನ ಕಲ್ಯಾಣ ಮಂಟಪದ ಸಭಾಂಗಣ ಹಾಗೂ ಹೊರಾಂಗಣದಲ್ಲಿ ಯೋಗಾಭ್ಯಾಸ ನಡೆಯಿತು.

ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಸುಮಾರು 700 ಮಂದಿ ವಿದ್ಯಾರ್ಥಿಗಳು ಎರಡು ಗಂಟೆಗಳ ಕಾಲ ನಿರಂತರ ಯೋಗಾಭ್ಯಾಸ ಮಾಡಿ ಗಮನ ಸೆಳೆದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ಖುಷಿ ಮುನಿಗಳಿಂದ ತಿಳಿಯಲ್ಪಟ್ಟ ಯೋಗಕ್ಕೆ ಇಂದು ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಿದೆ ಎಂದರು.
ಎಸ್ ವಿ.ಎಸ್ ದೇವಳ ವಿದ್ಯಾಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ಶೆಣೈ , ಸಂಚಾಲಕ ಎ. ಗೋವಿಂದ ಪ್ರಭು,ಕೋಶಾಧಿಕಾರಿ ಪ್ರವೀಣ್ ಕಿಣಿ, ಪ್ರಮುಖರಾದ ಪ್ರಕಾಶ್ ಪ್ರಭು, ವಸಂತ ಮಲ್ಯ, ಶ್ರೀನಿವಾಸ ಪೈ ಮೊದಲಾದವರು ಹಾಜರಿದ್ದರು.ಶಾಲಾ ಮುಖ್ಯೋಪಧ್ಯಾಯರಾದ ನಂದಿನಿ, ಚಂದ್ರಮ್ಮ, ರೋಶನಿ ತಾರಾ ಡಿಸೋಜಾ, ಕುಸಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *