Header Ads
Breaking News

ಶ್ರೀ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಕಚೇರಿ ಉದ್ಘಾಟನೆ

ಮಂಗಳೂರಿನ ಬಿಜೈ ಬಟ್ಟಗುಡ್ಡದಲ್ಲಿರುವ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಸ್ವಂತ ಆಡಳಿತ ಕಚೇರಿ ಹಾಗೂ ಶಾಖೆಯ ಉದ್ಘಾಟನಾ ಸಮಾರಂಭವೂ ಮಂಗಳೂರಿನ ಪದವಿನಂಗಡಿಯಲ್ಲಿರುವ ಸಾನ್ವಿ ಪ್ಲಾಜಾದಲ್ಲಿ ನಡೆಯಿತು.

ಮಂಗಳೂರಿನ ಪದವಿನಂಗಡಿಯ ಸಾನ್ವಿ ಪ್ಲಾಜಾದ ಒಂದನೇ ಮಹಡಿಯಲ್ಲಿ ಶ್ರೀ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಆಡಳಿತ ಕಚೇರಿಯನ್ನು ಮಂಗಳೂರಿನ ಮೆಸ್ಕಾಂ ಎಂಜಿನಿಯರ್ ಅಧೀಕ್ಷಕ ಮಂಜಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಸಂಘ ಅತ್ಯಂತ ಸುಲಲಿತವಾಗಿ ಸುಬದ್ರವಾಗಿ ಕಾರ್ಯಾಚರಿಸುತ್ತಿದೆ. ಪದವಿನಂಗಡಿಯ ಜನತೆಗೆ ಈ ಸಹಕಾರಿ ಸಂಘ ಸದುಪಯೋಗ ಅಗಲಿ ಎಂದು ಶುಭಹಾರೈಸಿದರು.

ಇನ್ನು ಭದ್ರತಾ ಕೊಠಡಿಯನ್ನು ರವೀಂದ್ರ ನಾಯರ್ ಕುಡುಪು ಉದ್ಘಾಟಿಸಿದರು. ಭದ್ರತಾ ಕೋಶವನ್ನು ಬಿ. ವಿಶ್ವನಾಥ್ ಬಂಗೇರಾ ಉದ್ಘಾಟಿಸಿದರು. ಠೇವಣಿ ಪತ್ರವನ್ನು ಮಂಗಳೂರಿನ ಪಾಲಿಕೆಯ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು.

ಗಣಕ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರಾದ ಬಬಿತಾ ರವೀಂದ್ರ ಅವರು ಸಹಕಾರಿ ಬ್ಯಾಂಕ್ ಅನೇಕ ಮಂದಿಗೆ ಸೇವೆಯನ್ನು ನೀಡುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಬ್ಯಾಂಕ್‍ನ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.
ಈ ಸಂದರ್ಭ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಎ. ಭೋಜ ಎಸ್. ಕುಲಾಲ್ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಮತ್ತಿತತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *