

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಆಶಯದಂತೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ರಾಮ ಭಕ್ತರಿಂದಲೂ ನಿಧಿ ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ “ನಿಧಿಸಮರ್ಪಣಾ ಅಭಿಯಾನ” ಜನವರಿ 15ರಿಂದ ಫೆಬ್ರವರಿ 5ರ ವರೆಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ನ ಪ್ರಾಂತ ಕಾರ್ಯಧ್ಯಕ್ಷರಾದ ಪ್ರೋಫೆಸರ್ ಎಂ.ಬಿ.ಪುರಾಣಿಕ್ ಹೇಳಿದರು.ಅವರು, ಮಂಗಳೂರಿನ ವಿಶ್ವ ಹಿಂದೂ ಪರಿಷದ್ನ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಆಶಯದಂತೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ರಾಮ ಭಕ್ತರಿಂದಲೂ ನಿಧಿ ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ನಿಧಿ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದರು.
ಬಳಿಕ ವಿಶ್ವ ಹಿಂದೂ ಪರಿಷದ್ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮತನಾಡಿ ಒಟ್ಟು 2.7 ಎರಕೆ ವಿಸ್ತೀರ್ಣದಲ್ಲಿ ಸುಮಾರು ಮೂರು ಅಂತಸ್ಥಿನಲ್ಲಿ ಮಂದಿರ ನಿರ್ಮಾಣವಾಗುತ್ತಿದ್ದು. ಉದ್ದ 365 ಪೀಟ್, 235 ಲೀಟ್ ಅಗಲ ಎತ್ತರ 161 ಲೀಟ್ ಹೊಂದಿದೆ. ಉಡುಪಿ ದಕ್ಷಿಣ ಕನ್ನಡ ಕೊಡಗು ಕಾರಗೋಡು ಜಿಲ್ಲೆಯಲ್ಲಿ ಮನೆ ಮನೆಗಳಿಗೆ ಬೇಟಿ ನೀಡುತ್ತೇವೆ. ಎಂದು ಒಟ್ಟು “ನಿಧಿಸಮರ್ಪಣಾ ಅಭಿಯಾನ” ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷದ್ನ ಪ್ರಾಂತ ಸಹಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ವಿಶ್ವ ಹಿಂದೂ ಪರಿಷದ್ನ ಮಂಗಳೂರು ವಿಭಾಗದ ಜಿಲ್ಲಾಧ್ಯಕ್ಷರಾದ ಗೊಪಾಲ್ ಕುತ್ತಾರ್, ವಿಶ್ವ ಹಿಂದೂ ಪರಿಷದ್ನ ಮಂಗಳೂರು ವಿಭಾಗದ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳ ಮಂಗಳೂರು ವಿಭಾಗ ಸಂಚಾಲಕರಾದ ಭುಜಂಗ ಕುಲಾಲ್ ಉಪಸ್ಥಿತರಿದ್ದರು.