Header Ads
Breaking News

ಸಂಕಷ್ಟದಲ್ಲಿದ್ದ ಅಂಗವಿಕಲರಿಗೆ ಪೀಸ್ ಫೌಂಡೇಶನ್ ನೆರವು

ಲಾಕ್‍ಡೌನ್ ಆದ ಬಳಿಕ ಸಂಕಷ್ಟದಲ್ಲಿದ್ದ ಅಂಗವಿಕಲರಿಗೆ ಉಡುಪಿಯ ಪೀಸ್ ಪೌಂಡೇಶನ್ ನೆರವಿಗೆ ಧಾವಿಸಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪೀಸ್ ಪೌಂಡೇಶನ್ ನ ಮ್ಯಾನೇಜರ್ ವಿಲ್ಡನ್ ಮಸ್ಕರೇನಸ್ ಹಾಗೂ ಕಾರ್ಯದರ್ಶಿ ಜಗದೀಶ್ ಭಟ್ ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ಆದ ಬಳಿಕ ಜಿಲ್ಲೆಯಾದ್ಯಂತ 12 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಒದಗಿಸಿದ್ದು ಅದರಲ್ಲಿ ಆರು ಸಾವಿರದ ಐನೂರು ಮಂದಿ ಅಂಗವಿಕಲರಿಗೆ ಕಿಟ್ ಒದಗಿಸಲಾಗಿದೆ. ಪೀಸ್ ಪೌಂಡೇಶನ್ ಬರೇ ಲಾಕ್ ಡೌನ್ ಸಂದರ್ಬದಲ್ಲಿ ಬಡವರಿಗೆ, ಸಂಕಷ್ಟದಲ್ಲಿ ಇರುವವರಿಗೆ ನೆರವಿಗೆ ಬಾರದೇ ಇತರ ಸಂದರ್ಬದಲ್ಲೂ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದೆ. ಆರೋಗ್ಯದ ಬಗ್ಗೆ ಜಾಗೃತಿ, ಶಿಕ್ಷಣ, ಮಹಿಳಾ ಸಬಲೀಕರಣ, ಸ್ಕಾಲರ್ ಶಿಪ್, ಹೀಗೆ ಅನೇಕ ಸಾಮಾಜಿಕ ಕಾರ್ಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *