Header Ads
Header Ads
Breaking News

ಸಂಗೀತ ಜನಪದ ವಾದ್ಯ ಕಲಾವಿದರ ಸಂಘದ 7ನೇ ವರ್ಷದ ಮಹಾಸಭೆ : ಶಾಸಕ ಉಮಾನಾಥ ಎ. ಕೋಟ್ಯಾನ್‌ರಿಂದ ಸಭೆ ಉದ್ಘಾಟನೆ

ಮೂಡುಬಿದಿರೆ : ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘ (ರಿ) ಮೂಡುಬಿದಿರೆ ಇದರ ೭ನೇ ವರ್ಷದ ಮಹಾಸಭೆ ಸಮಾಜಮಂದಿರದಲ್ಲಿ ಗುರುವಾರ ನಡೆಯಿತು. ಶಾಸಕ ಉಮಾನಾಥ ಎ. ಕೋಟ್ಯಾನ್ ಸಭೆಯನ್ನು ಉದ್ಘಾಟಿಸಿ ಮಾತನಾಡಿ ವಾದ್ಯ ಕಲಾವಿದರ ಸಂಘಟನೆಗಳು ಬಲಿಷ್ಠವಾಗಬೇಕು. ಸಂಗೀತ ವಾದ್ಯದಲ್ಲಿ ಆಧುನಿಕ ಸ್ಪರ್ಶವಿರಬೇಕು ಆದರೆ ಪರಾಂಪರಿಕ ಸಂಗೀತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದರು. ನೋಟರಿ ಶ್ವೇತಾ ಜೈನ್ ಅಧ್ಯಕ್ಷತೆ ವಹಿಸಿದ್ದರು.65 ವರ್ಷಗಳಿಂದ ತಾಸೆ ಕಲಾವಿದರಾಗಿರುವ ಕಾಲಪ್ಪಣ್ಣ ಶೇರಿಗಾರ ಮತ್ತು ಅಶ್ವತ್ಥಪುರದ ಹಿರಿಯ ಡೋಲು ವಾದಕ ಕೃಷ್ಣ ದೇವಾಡಿಗ ಅವರ ಕಲಾ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಅನಾರೋಗ್ಯದಿಂದಿರುವ ಕಲಾವಿದರಾದ ಸುರತ್ಕಲ್‌ನ ಗಿರಿಯ ದೇವಾಡಿಗ ಮತ್ತು ಎಡಪದವು ಜನಾರ್ದನ ಪೂಜಾರಿ ಅವರಿಗೆ ಸಂಘದ ವತಿಯಿಂದ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಮಂಗಳೂರಿನ ವಕೀಲ ರವಿ ಪ್ರಸನ್ನ ಸಿ.ಕೆ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ರಾಜೇಶ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸುರೇಶ್ ದೇವಾಡಿಗ, ನಾದಸ್ವರ ವಿದ್ವಾಂಸರಾದ ನಾಗೇಶ್ ಎ.ಬಪ್ಪನಾಡು ಮತ್ತು ಲಿಂಗಪ್ಪ ಶೇರಿಗಾರ್ ಕಟೀಲು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *