Header Ads
Breaking News

ಸಂಡೇ ಲಾಕ್‍ಡೌನ್‍ನಲ್ಲಿ ಬಡ ಮಹಿಳೆಯ ಮನೆ ದುರಸ್ಥಿ ಕಾರ್ಯ-ಲಾಕ್‍ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಕುಲಾಲ್ ಸಂಘ

ನಿನ್ನೆ ಕೊರೊನಾ ಲಾಕ್ಡೌನ್ ಇದ್ದರೂ ಕೂಡ ಕುಲಾಲ್ ಸಂಘ ವಗ್ಗ ಹಾಗೂ ಕುಲಾಲ ಯುವ ವೇದಿಕೆ ಬಂಟ್ವಾಳ ಇದರ ಸದಸ್ಯರು ಬಡ ಮಹಿಳೆಯ ಮನೆ ದುರಸ್ಥಿ ಕಾರ್ಯ ಮಾಡುವ ಮೂಲಕ ಸದುಪಯೋಗ ಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಕಾವಳಮೂಡುರು ಗ್ರಾಮದ ಬರ್ಕಟ ಎಂಬಲ್ಲಿನ ಮೋಹಿನಿ ಎಂಬ ಬಡ ಮಹಿಳೆಯ ವಾಸ್ತವ್ಯದ ಮನೆ ದುರಸ್ತಿ ಕಾಣದೆ ಕುಸಿಯುವ ಹಂತ ತಲುಪಿತ್ತು. ಈ ಬಗ್ಗೆ ಮಾಹಿತಿ ಪಡೆದ ಕುಲಾಲ ಸಂಘಟನೆಗಳು ಭಾನುವಾರದ ಲಾಕ್ ಡೌನ್ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಮನೆ, ಶೌಚಾಲಯ, ರಸ್ತೆಯನ್ನು ದುರಸ್ತಿ ಪಡಿಸಿದ್ದಾರೆ. 30 ಮಂದಿ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *