Header Ads
Breaking News

ಸಂತ ಅಲೊಶಿಯಸ್ ರಂಗ ಅಧ್ಯಯನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಾಪಿಸಲಾದ ಸಂತ ಅಲೊಶಿಯಸ್ ರಂಗ ಅಧ್ಯಯನ ಕೇಂದ್ರವನ್ನು ಮಂಗಳೂರಿನ ಹಿರಿಯ ರಂಗಕರ್ಮಿ, ನೀನಾಸಂ ಕಲಾ ರಂಗಶಾಲೆಯ ಪದವೀಧರರಾದ ಮೋಹನ್ ಚಂದ್ರ ಅವರು ಉದ್ಘಾಟಿಸಿದ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ.ಫಾ. ಮೆಲ್ವಿನ್ ಜೆ ಪಿಂಟೋ ವಹಿಸಿದ್ರು. ಈ ವೇಳೆ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ ಪ್ರವೀಣ್ ಮಾರ್ಡಿಸ್, ಪ್ರಭಾರ ಕುಲಸಚಿವ ಡಾ. ಆಲ್ವಿನ್ ಡೇಸಾ, ಕೇಂದ್ರದ ನಿರ್ದೇಶಕ ಡಾ. ದಿನೇಶ್ ನಾಯಕ್ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಅಲೋಶಿಯಸ್ ನಾಟಕೋತ್ಸವ-21ರ ಉದ್ಘಾಟನೆಯನ್ನು ರಂಗ ಮತ್ತು ಚಲನಚಿತ್ರ ನಟ ಕುಸಲ್ದರಸೆ ನವೀನ್ ಡಿ ಪಡೀಲ್ ಉದ್ಘಾಟಿಸಿದ್ರು. ಬಳಿಕ ಶಶಿರಾಜ್ ಕಾವೂರು ಬರೆದು ನಿರ್ದೇಶಿಸಿದ ದ್ಯಾಟ್ಸ್ ಆಲ್ ಯುವರ್ ಆನರ್ ನಾಟಕ ಪ್ರದರ್ಶನಗೊಂಡಿತು.

Related posts

Leave a Reply

Your email address will not be published. Required fields are marked *