Header Ads
Header Ads
Header Ads
Header Ads
Header Ads
Header Ads
Breaking News

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಯುವ ಕವಿಗೋಷ್ಠಿ

ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ರೇಡಿಯೋ ಸಾರಂಗ್ 107.8FM ಹಾಗೂ ಕನ್ನಡ ವಿಭಾಗದವರು ಜಂಟಿಯಾಗಿ ಆಯೋಜಿಸಿದ ಅಂತರ್ ಕಾಲೇಜು ಮಟ್ಟದ ‘ಯುವ ಕವಿಗೋಷ್ಠಿ’ ಸೆಪ್ಟೆಂಬರ್ 7, 2019 ರಂದು ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಲೇಖಕಿ, ಶ್ರೀಮತಿ ಚಂದ್ರಕಲಾ ನಂದಾವರ ಮತ್ತು ಲೇಖಕ ಶ್ರೀ ವಿಲ್ಸನ್ ಕಟೀಲ್ ಇವರು ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ.ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ 21 ಯುವ ಕವಿಗಳು ಭಾಗವಹಿಸಿದ್ದರು. ಮೊದಲನೆಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿ ಕಾವ್ಯ ಎ.ಆರ್. ಪಡೆದುಕೊಂಡರು. ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕ್ರಮವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳಾದ ಅಭ್ಯುದಯ ಹಾಗೂ ಅಭಿಷೇಕ್ ಪಿ.ಎ. ಗಳಿಸಿದರು.
ರೇಡಿಯೋ ಸಾರಂಗ್‍ನ ನಿರ್ದೇಶಕರಾದ ವಂ. ಡಾ. ಮೆಲ್ವಿನ್ ಪಿಂಟೋ ಎಸ್.ಜೆ. ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ ಕುಮಾರಿ ಸ್ವಾಗತಿಸಿ, ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply

Your email address will not be published. Required fields are marked *