Header Ads
Header Ads
Breaking News

ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ದೇಶ ಹಾಗೂ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಹೆಸರು ಗಳಿಸಿಕೊಂಡಿರುವ ಶಿಕ್ಷಣ ಸಂಸ್ಥೆ ಅಂದ್ರೆ ಅದು ಮಂಗಳೂರಿನ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ. ವಿಶಾಲ ವಿಸ್ತೀರ್ಣದ ಕ್ಯಾಂಪಸ್ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನ ಪಡೆದುಕೊಂಡಿದೆ. ಇದೀಗ ಸಂತ ಅಲೋಶಿಯಸ್ ಕಾಲೇಜಿನ 2019-20ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೊಂಡಿದೆ.

 ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೃದಯ ಭಾಗದಲ್ಲಿದೆ ಸಂತ ಅಲೋಶಿಯಸ್ ಕಾಲೇಜು. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ ಈ ಶಿಕ್ಷಣ ಸಂಸ್ಥೆ ಪ್ರಮುಖವಾಗಿ ಬೆಳೆದುಕೊಂಡಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ 2019-20 ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೊಂಡಿತು. ಇಂದು ಕಾಲೇಜಿನ ಎಲ್‌ಸಿಆರ್‌ಐ ಬ್ಲಾಕ್‌ನ ಎಲ್.ಎಫ್ ರಸ್ಕಿನಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ 2019-20 ನೇ ಸಾಲಿನ ವಿದ್ಯಾರ್ಥಿ ಪರಿಷತ್‌ನ್ನು ಉದ್ಘಾಟಿಸಲಾಯಿತು.
2019-20 ನೇ ಸಾಲಿನ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷರಾಗಿ ಲಾಯ್ಡ್ ವಿನೀತ್ ಸಿಕ್ವೇರಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿ ರೂಪಾಲ್ ಡಿಸೋಜಾ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ವರುಣ್ ನಿಲೇಶ್ ಸಿಂಗಲಾ, ಜೊತೆ ಕಾರ್ಯದರ್ಶಿಯಾಗಿ ಮೆಲ್ನಿಥಾ ಟ್ವಿಂಕಲ್ ಕೊರಿಯಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಿಲ್ಟನ್ ಆಶ್ವಿನ್ ಮಸ್ಕರೇನಸ್ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ಮಹಮ್ಮದ್ ರುಮೈಝ್ ಆಯ್ಕೆಗೊಂಡಿದ್ದಾರೆ. ನೂತನ ಪದಾಧಿಕಾರಿಗಳಿಗೆ ಪ್ರಾಂಶುಪಾಲ ರೆ.ಫಾ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಪ್ರತಿಜ್ಞಾವಿಧಿ ಬೋಧಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿ ಡಾ.ಪಿ.ಎಸ್.ಯಡಪ್ತಾಯ ಅವರು ವಿದ್ಯಾರ್ಥಿ ಪರಿಷತ್‌ನ್ನು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಮನಸ್ಸಿನ ನಿಯಂತ್ರಣ ಎನ್ನುವುದು ಬಹಳ ಕಷ್ಟಕರ ವಿಚಾರವಾಗಿದೆ. ಹೀಗಾಗಿ ಸಕಾರತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ದೃಢ ಸಂಕಲ್ಪ, ಛಲಗಳಿಂದ ಸಾಧನೆಯನ್ನ ಮಾಡಬಹುದು ಎಂದು ಕರೆ ನೀಡಿದರು. 
 ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸಂತ ಅಲೋಶಿಯಸ್ ಇನ್ಸ್‌ಟ್ಯೂಷನ್‌ನ ರೆಕ್ಟರ್ ರೇ.ಫಾದರ್ ಡೈನಿಶಿಯಸ್ ವಾಝ್ ಎಸ್.ಜೆ ವಹಿಸಿದ್ರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅವುಗಳನ್ನು ನನಸು ಮಾಡುವಲ್ಲಿ ಕಠಿಣವಾಗಿ ಪರಿಶ್ರಮ ಪಡಬೇಕು.ಪ್ರತಿಯೊಬ್ಬರು ಒಂದೊಂದು ಸಾಮರ್ಥ್ಯವನ್ನು ಹೊಂದಿಕೊಂಡಿರುತ್ತಾರೆ. ತಮ್ಮ ಪ್ರತಿಭೆಯನ್ನ ತೋರಿಸಲು ಕಾಲೇಜು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತದೆ ಎಂದು ಅವರು ಹೇಳಿದರು.
ಬಳಿಕ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ಬಹಳ ಮುಖ್ಯವಾಗಿದೆ.ನಾಯಕರು ಅವರ ದೌರ್ಬಲ್ಯತೆ , ಸಾಮರ್ಥ್ಯ, ಸಮಾಜದ ದೃಷ್ಟಿ ಕೋನಗಳನ್ನು ಅರ್ಥ ಮಾಡಿಕೊಳ್ಳಬೇಕೆಂದು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟರ್ ನರಹರಿ, ವಿದ್ಯಾರ್ಥಿ ಸಂಘದ ನಿರ್ದೇಶಕ ಡಾ. ರತನ್ ಟಿ.ಮೊಹಂತಾ, ಉಪಾಧ್ಯಕ್ಷ ಡಾ| ಸಂತೋಷ್ ಗೊವಿಯಸ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *