Header Ads
Breaking News

ಸಂತ ಅಲೋಶಿಯಸ್ ಪತ್ರಿಕೋದ್ಯಮ ವಿಭಾಗದಿಂದ ಹೊಸ ಸಂಚಾರ ನಿಯಮ ತಿದ್ದುಪಡಿ ಬಗ್ಗೆ ಜಾಗೃತಿ ಕಾರ್ಯಕ್ರಮ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹೊಸ ಸಂಚಾರ ನಿಯಮಗಳ ತಿದ್ದುಪಡಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಜರುಗಿತು.ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಕಾಡೆಮಿಕ್ ಪಠ್ಯಕ್ರಮದ ಅಂಗವಾಗಿ ತೃತೀಯ ಬಿಎ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ನಡೆಯಿತು. ಕದ್ರಿ ಸಂಚಾರ ಕೇಂದ್ರದ ಸಬ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್ ಅವರು ಸಂಚಾರ ನಿಯಮದ ಬಗ್ಗೆ ಮತ್ತು ಕಾನೂನುಗಳನ್ನು ತಿದ್ದುಪಡಿ ಮಾಡುವ ಬಗ್ಗೆ ಮಾಹಿತಿ ನೀಡಿದರು.ತೃತೀಯ ಬಿಎ ವಿದ್ಯಾರ್ಥಿ ಆದರ್ಶ್ ಅವರು ರಸ್ತೆ ಸುರಕ್ಷತಾ ನೀತಿಗಳ ಬಗ್ಗೆ ತಿಳಿಸಿದರು.

ಈ ಸಂದರ್ಭ ಕದ್ರಿ ಸಂಚಾರ ಠಾಣೆಯ ಕಾನ್ಸೆಸ್ಟೆಬಲ್ ನಿರಂಜನ್, ಬಶರ್, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಎಂ.ಕೆ. ಅಯ್ಯಪ್ಪ, ವಿಪಿನ್ ವರ್ಗಿಸ್, ವಿದ್ಯಾರ್ಥಿ ಕಾರ್ಡಿನೇಟರ್ ಕಿರಣ್ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *