Header Ads
Breaking News

ಸಂಪಾಜೆಯಲ್ಲಿ 1 ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿ; ಮಾ.21ರಂದು ಕಾಮಗಾರಿಗಳ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯಿತಿನಲ್ಲಿ ನಿರ್ಮಿಸಲಾಗಿರುವ ಸಂಜೀವಿನಿ ಕಟ್ಟಡ, ವಾಣಿಜ್ಯ ಸಂಕೀರ್ಣದ ಮೇಲ್ಛಾವಣಿ ಕಟ್ಟಡ ಮತ್ತು ಪ್ಲಾಸ್ಟಿಕ್ ಸೌಧ ಸೇರಿದಂತೆ ರೂ.1 ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯು ಮಾ.21ರಂದು ಸಂಪಾಜೆಯಲ್ಲಿ ನಡೆಯಲಿದೆ ಎಂದು ಸಂಪಾಜೆ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮಾ.21ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಸುಂದರಿ ಮುಂಡಡ್ಕ ವಹಿಸಲಿದ್ದಾರೆ. ಸಂಜೀವಿನಿ ಕಟ್ಟಡವನ್ನು ಶಾಸಕರ ಅಂಗಾರ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಲಿದ್ದಾರೆ. ವಾಣಿಜ್ಯ ಸಂಕೀರ್ಣದ ಮೇಲ್ಛಾವಣಿ ಕಟ್ಟಡವನ್ನು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಪ್ಲಾಸ್ಟಿಕ್ ಸೌಧವನ್ನು ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಉದ್ಘಾಟಿಸುವರು. ಅಲ್ಲದೆ ಗ್ರಾಮ ಪಂಚಾಯಿತಿನ ನಾನಾ ಯೋಜನೆಯಡಿ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆಯೂ ಇದೇ ವೇಳೆ ನಡೆಯಲಿದೆ. ಸುಮಾರು 1 ಕೋಟಿಗೂ ಮಿಕ್ಕಿ ಕಾಮಗಾರಿಗಳು ಉದ್ಘಾಟನೆಯಾಗಲಿದೆ ಎಂದರು.

ನಾವು ಕಳೆದ 5 ವರ್ಷಗಳಿಂದ ಸರಕಾರ, ಸಚಿವರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಜಿ.ಪಂ., ತಾ.ಪಂ. ಹೀಗೆ ವಿವಿಧ ಅನುದಾನಗಳನ್ನು ಸೇರಿಸಿಕೊಂಡು ಸುಮಾರು 5 ಕೋಟಿಗೂ ಮಿಕ್ಕಿ ಅಭಿವೃದ್ಧಿ ನಮ್ಮ ಗ್ರಾಮದಲ್ಲಿ ಆಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸದಸ್ಯರುಗಳಾದ ಜಿ.ಕೆ. ಹಮೀದ್, ನಾಗೇಶ್ ಪಿ.ಆರ್. ಇದ್ದರು.

Related posts

Leave a Reply

Your email address will not be published. Required fields are marked *