Header Ads
Header Ads
Breaking News

ಸಂಪಾಜೆ ನಿರಾಶ್ರಿತರ ಕೇಂದ್ರದಲ್ಲಿ ದೀಪಾವಳಿಯ ಸಂಭ್ರಮ

ಬೆಳ್ಳಾರೆ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕರು ನಿರಾಶ್ರಿತರಾ ಸಂಪಾಜೆ ನಿರಾಶ್ರಿತರ ಕೇಂದ್ರದಲ್ಲಿರುವ ಜನರು ತಮ್ಮ ಜೀವನದ ನೋವನ್ನು ನುಂಗಿ ದೀಪಾವಳಿ ಆಚರಿಸಿ ಸಂಭ್ರಮಿಸಿದರು.ಅವರ ಜೀವನದಲ್ಲಿ ಅನೇಕ ನೋವುಗಳಿದ್ದು ಬರೀ ಕತ್ತಲಿನಲ್ಲಿ ಜೀವನ ಕಳೆಯುವಂತಾಗಿದೆ. ನಿರಾಶ್ರಿತರಿಗೆ ಈ ತನಕ ಸರಕಾರ ಶಾಶ್ವತ ನೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡದಿರುವುದರಿಂದ ಮಾನಸಿಕವಾಗಿ ಅವರು ನೊಂದುಕೊಂಡು ಜೀವನ ಕಳೆಯುವಂತಾಗಿದೆ. ಕಳೆದ ವರ್ಷ ತಮ್ಮ ತಮ್ಮ ಮನೆಗಳಲ್ಲಿ ಬಂದು ಬಳಗ ನೆಂಟರಿಷ್ಟರೊಂದಿಗೆ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಿದ್ದರು.ಆ ದೀಪಾವಳಿಯನ್ನು ನೆನೆಸುತ್ತ ಕೆಲ ದಿನಗಳ ಹಿಂದೆ ನಿರಾಶ್ರಿತರು ಕಣ್ನೀರು ಇಡುತ್ತ ಈ ಸಲ ನಮ್ಮ ಪಾಲಿಗೆ ದೀಪಾವಳಿ ಬರೇ ಕತ್ತಲು ಎಂದು ಮನದಲ್ಲಿ ನೆನೆಯುತ್ತಿದ್ದರು. ಆದರೆ ನಿರಾಶ್ರಿತರಿಗೆ ನಿರಾಶೆಯಾಗಿಲ್ಲ. ನಿರಾಶ್ರಿತರ ಕೇಂದ್ರದ ಉಸ್ತುವಾರಿ ವಿಹಿಸಿಕೊಂಡಿರುವ ಅವಿನಾಶ್ ಕಡೆಪಾಲ ಅವರು ದೀಪಾವಳಿಯನ್ನು ಆಚರಿಸುವ ಸಂತೋಷದ ಸುದ್ದಿಯನ್ನು ನೀಡಿದರು. ಕಳೆದ ವರ್ಷದ ದೀಪಾವಳಿಯನ್ನು ನೆನಪಿಸಿಕೊಂಡು ನೊಂದುಕೊಂಡಿದ್ದ ನಿರಾಶ್ರಿತರ ಮುಖದಲ್ಲಿ ಮಂದ ಹಾಸ ಬೀರಿತು. ಪಟಾಕಿ, ಸುಡುಮದ್ದು ಸಿಡಿಸಿ ನಕ್ಷತ್ರ ಕಡ್ಡಿ ಉರಿಸಿ ಸಂಭ್ರಮಿಸಿ, ತಿಂಡಿ ತಿನಿಸು ತಿಂದು ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ಅನೇಕ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಭಾಗವಹಿಸಿ ನಿರಾಶ್ರಿತರಿಗೆ ಸಹಕಾರ ನೀಡಿದದ್ದರು.

Related posts

Leave a Reply